
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.23 ನಾಡಿನ ಅಭಿವೃದ್ದಿಗೆ ವಾಲ್ಮೀಕಿ ನಾಯಕ ಸಮಾಜದ ಅರಸರು ಮತ್ತು ಪಾಳೇಗಾರರು ಅಪಾರವಾದ ಕೊಡುಗೆ ನೀಡಿದ್ದಾರೆ, ಆದರೇ ಇತಿಹಾಸ ಪುಟದಲ್ಲಿ ನೀಡಿದ ಕೊಡಿಗೆಯನ್ನು ಸರಿಯಾಗಿ ದಾಖಲೆ ಮಾಡದೇ ಕಡೆಗಣಿಸಲಾಗಿದೆ ಎಂದು ಬೆಂಗಳೂರಿನ ಸಂಶೋಧಕ, ಹಾಗೂ ನಟ, ನಿರ್ದೇಶಕರಾದ ರಾಧಾಕೃಷ್ಣ ಪಲ್ಲಕ್ಕಿ ಹೇಳಿದರು.
ನಗರದ ಶ್ರೀಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ವಿಜಯನಗರ ಜಿಲ್ಲಾ ವಾಲ್ಮೀಕಿ ನಾಯಕ ಸೇವಾನಿರತ ಮತ್ತು ನಿವೃತ್ತ ನೌಕರರ ಸಂಘ, ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಂಘ, ಎಲ್.ಐ.ಸಿ ವಾಲ್ಮೀಕಿ ನಾಯಕ ನೌಕರರ ಮತ್ತು ನಿವೃತ್ತ ನೌಕರರ ಹಿತರಕ್ಷಣ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ನಾಯಕ ಅರಸರು ಮತ್ತು ಪಾಳೇಗಾರರ ಇತಿಹಾಸ: ಪರಂಪರೆ-ಅಸ್ಮಿತೆ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮತ್ತು ಅದರ ಅಭಿವೃದ್ಧಿಗೆ ನಾಯಕ ಸಮಾಜದ ರಾಜರು ಮತ್ತು ಪಾಳೇಗಾರರ ಕೊಡುಗೆ ಅಪಾರವಾಗಿದೆ.
ಚಿತ್ರದುರ್ಗದ ದೊರೆ ಮದಕರಿ ನಾಯಕ ಮತ್ತು ಭರಮ್ಮಣ್ಣ ನಾಯಕರು ನೂರಾರು ಕೆರೆಗಳನ್ನು ಕಟ್ಟಿಸಿ ಕೃಷಿಗೆ ಹೆಚ್ಚು ಅದ್ಯತೆ ನೀಡಿದ್ದರ ಪರಿಣಾಮವಾಗಿ ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಕೃಷಿಯನ್ನು ನಂಬಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಶಿವಪ್ಪ ನಾಯಕ ಅವರು ಅಂದು ಅಧುನಿಕ ಪೈಪ್ ಲೈನ್ ಹಾಕುವ ಮೂಲಕ ಕೆರೆಗಳ ನೀರು ವ್ಯಾರ್ಥವಾಗದಂತೆ ಹೊಲ ಗದ್ದೆಗಳಿಗೆ ಹರಿಸಿದ ಕಿರ್ತಿ ಶಿವಪ್ಪ ನಾಯಕರಿಗೆ ಸಲ್ಲಿಸುತ್ತದೆ, ಕುಡಿಯುವ ನೀರಿಗಾಗಿ ಅತಿ ಹೆಚ್ಚು ಬಾವಿಗಳನ್ನು ತಮ್ಮ ತಾಯಿ ತಂದೆ ಮತ್ತು ಪತ್ನಿಯರ ಹೆಸರಿನಲ್ಲಿ ಕಟ್ಟಿಸಿದ ಶಾಸನಗಳು ಇವೆ. ಆದರೆ ಅವರ ಕೊಡುಗೆಗಳನ್ನು ಇತಿಹಾಸಕರಾರು ತಿರುಚಿ ಬರೆದಿದ್ದಾರೆ. ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ, ಸಿಂಧೂರು ವೀರ ಲಕ್ಷ್ಮಣ ನವರ ಕುರಿತು 100 ಕೋಟಿ ರೂ ವೆಚ್ಚದ ಸಿನಿಮಾ ಮಾಡಲು ಮುಂದಾಗಿದ್ದು ಅದು ಕಾರಣಾಂತರಗಳಿಂದ ನೆನೆಗುದಿಗ ಬಿದ್ದಿದೆ.
ಅರಸರು ಮತ್ತು ಪಾಳೇಗಾರರ ಅಳ್ವಿಕೆಯ ಕಾಲದಲ್ಲಿ ಮಠ ಮಂದಿರಗಳಿಗೆ ಹೆಚ್ಚು ದಾನ ನೀಡಿದು.್ದ ಅಲ್ಲದೇ ದೇಗುಲವನ್ನು ನಿರ್ಮಾಣ ಮಾಡಿರುವ ಬಗ್ಗೆ ಅನೇಕ ಶಾಸನಗಳಿವೆ. ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿ ದಾಖಲೀಕರಿಸುವ ಕಾರ್ಯಕ್ಕೆ ಸಮಾಜದ ಪ್ರತಿಯೊಬ್ಬರು ಕೈಜೊಡಿಸಬೇಕು ಎಂದರು.
ಚಿತ್ರದುರ್ಗದ ಇತಿಹಾಸವನ್ನು ಸಹ ತಿರುಚಲಾಗಿದೆ, ನಿಜವಾದ ಸಂಶೋಧನೆ ನಡೆದು ದಾಖಲಿಕರಣ ಮಾಡಬೇಕು ಎಂದ ಅವರು ವಾಲ್ಮೀಕಿ ನಾಯಕ ಅರಸರು ಮತ್ತು ಪಾಳೇಗಾರರ ಇತಿಹಾಸ ಪರಂಪರೆ ಕುರಿತು ರಾಜ್ಯ ವ್ಯಾಪ್ತಿ ಸಂಶೋಧನೆ ಕೈಗೊಂಡು ಪುಸಕ್ತ ರೂಪದಲ್ಲಿ ದಾಖಲು ಮಾಡುವುದಾಗಿ ಹೇಳಿದರು. ಇತಿಹಾಸ ಪುರುಷರ ವಂಶಾವಳಿಯ ದಾಖಲೆಗಳನ್ನು ಸಹ ಕಲೆಹಾಕುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂಶೋಧಕ ಹಾಗೂ ಸಿನಿಮಾ ನಟ, ನಿರ್ದೇಶಕರಾದ ರಾಧಾಕೃಷ್ಣ ಪಲ್ಲಕ್ಕಿ ಅವರಿಗೆ ವಾಲ್ಮೀಕಿ ಕೋಕಿಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಸ್ಪಿ ಹಾಗೂ ವಿಜಯನಗರ ವಾಲ್ಮೀಕಿ ನಾಯಕ ಸೇವಾನಿರತರ ಸಂಘದ ಅಧ್ಯಕ್ಷ ಡಾ.ಟಿ.ಮಂಜುನಾಥ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗುಂಡಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ ಎಲ್ಐಸಿ ವಾಲ್ಮೀಕಿ ನಾಯಕ ನೌಕರರು ಹಾಗೂ ನಿವೃತ್ತ ನೌಕರರ ಹಿತರಕ್ಷಣ ಸಂಘದ ರಾಜ್ಯಾಧ್ಯಕ್ಷ ಬಿ.ಟಿ.ಬಸವರಾಜ, ಕಾರ್ಯದರ್ಶಿ ನಂದೀಶ್ ಬ್ಯಾಡಿಗಿ, ವಿಜಯನಗರ ಜಿಲ್ಲಾ ವಾಲ್ಮೀಕಿ ನಾಯಕ ಸೇವಾನಿರತ ನೌಕರರ ಸಂಘದ ಕಾರ್ಯದರ್ಶಿ ಗುಜ್ಜಲ ಶಿವಕುಮಾರ್, ಗೌರವಾಧ್ಯಕ್ಷರಾದ ಡಾ.ಬಿ.ಜಂಬಯ್ಯ ನಾಯಕ, ಕಿಶೋರ ಕುಮಾರ್, ತಾಲೂಕು ಸಮಿತಿ ಗೌರವಾಧ್ಯಕ್ಷ ಗುಜ್ಜಲ ವಿಶ್ವನಾಥ, ಕೆ. ಯಮನೂರಪ್ಪ, ಹಿರಿಯ ರಂಗಭೂಮಿ ಕಲಾವಿದೆÀ ಕೆ. ನಾಗರತ್ನಮ್ಮ, ಮಾರ್ಗದಪ್ಪ, ಶಿವಶಂಕರಯ್ಯ, ಕಮಟಿಗಿ ನಾಗರಾಜ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯನಗರ ಜಿಲ್ಲಾ ವಾಲ್ಮೀಕಿ ನಾಯಕ ಸೇವಾನಿರತ ಹಾಗೂ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ. ಕಡ್ಲಬಾಳ ಪನ್ನಂಗಧರ ಅವರು ಅಶಯನುಡಿ ನುಡಿದರು. ವಾಲ್ಮೀಕಿ ನಾಯಕ ಸೇವಾನಿರತ ಹಾಗೂ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ನಾಣಿಕೇರಿ ವೆಂಕಪ್ಪ ಸ್ವಾಗತಿಸಿದರು.































