
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.16: ನಗರದಲ್ಲಿ ನಾಡಿದ್ದು ಮಾ.18 ರಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಬಳ್ಳಾರಿ-ವಿಜಯನಗರ ಜಿಲ್ಲೆಯ ಕಾಲೇಜುಗಳು, ದಿಶಾಭೋದ್ ಫೌಂಡೇಶನ್ ಹಾಗು ನಾರ್ಕೋಟೆಕ್ ಕಂಟ್ರೋಲ್ ಬ್ಯೂರೋದ ಸಹಯೋಗದೊಂದಿಗೆ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್ ಮತ್ತು ಮಾನವ ಅಂಗಾಂಗ ದಾನದ ಜಾಗೃತಿ ವಾಕಥಾನವನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ ಇಲ್ಲಿನ ತಾರನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಗಾಣಿಗೇರ ಅವರು, ನಾಡಿದ್ದು ಬೆಳಿಗ್ಗೆ 7:30 ಕ್ಕೆ ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮೈದಾನದ ಆವರಣದಲ್ಲಿ ಇದರ ಉದ್ಘಾಟನಾ ಸಮಾರಂಭ ಆಯೋಜಿಸಿದೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ ಅವರು ವಾಕಥಾನ್ ಗೆ ಚಾಲನೆ ನೀಡಲಿದ್ದಾರೆ. ಕಲ್ಯಾಣ ಸ್ವಾಮಿ, , ಬಿಷಪ್ ಹೆನ್ರಿ ಡಿ’ಸೋಜಾ ಸಾನಿಧ್ಯ ವಹಿಸಲಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ, ದಿಕ್ಕೂಚಿ ಭಾಷಣ ಮತ್ತು ಪ್ರತಿಜ್ಞಾ ವಿಧಿ ಭೋದನೆ ಮಾಡಲಿದ್ದಾರೆ. ಗ್ರಾಮಿ೮ಣ ಶಾಸಕ ಬಿ.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.ಉಳಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಇಂತಹ ವಾಕಥಾನನ್ನು ಹಮ್ಮಿಕೊಂಡಿದ್ದ 13 ಜಿಲ್ಲೆಗಳ 15 ಸ್ಥಳಗಳಲ್ಲಿ 77 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಹಾಗೆ ನಗರದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ, ದಂತ, ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸ್ ನ 25ಕ್ಕೂ ಹೆಚ್ಚು ಕಾಲೇಜು ಹಾಗೂ ಇತರೆ ಸಂಸ್ಥೆಗಳು, 400 ಅಧ್ಯಾಪಕರು ಮತ್ತು 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಕಥಾನ್ನಲ್ಲಿ ಭಾಗವಹಿಸುತ್ತಿದ್ದಾರೆ.
ವಾಕಥಾನ್ ಮೆಡಿಕಲ್ ಕಾಲೇಜು ಮೈದಾನದಿಂದ ಸುಧಾ ಕ್ರಾಸ್ , ಇನ್ ಫಾಂಟರಿ ರೋಡ್, ಕನಕದಾಸ ವೃತ್ತ ಎಸ್.ಪಿ.ಸರ್ಕಲ್, ದುರ್ಗಮ್ಮ ಗುಡಿ ಮಾರ್ಗವಾಗಿ ಕಪ್ಪಗಲ್ಲು ರಸ್ತೆ ವಿ.ವೀ ಸಂಘದ ಕಿತ್ತೂರುರಾಣಿ ಚೆನ್ನಮ್ಮ ಪ್ರೌಢಶಾಲೆಯ ಅವರಣದವರೆಗೂ ನಡೆಯಲಿದೆ.
ಭಾರತದಲ್ಲಿ ಮಾದಕ ದ್ರವ್ಯ, ಮದ್ಯ ಮತ್ತು ತಂಬಾಕು ವ್ಯಸನವು ಹಿಂದಿನಿಂದಲೂ ಬಿಕ್ಕಟ್ಟಾಗಿದ್ದು ಇದು ವಿದ್ಯಾರ್ಥಿ ಸಮುದಾಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರ ದುಷ್ಪರಿಣಾಮ ಮತ್ತು
ರತದಲ್ಲಿ ವಾರ್ಷಿಕ ಅಂದಾಜು 5 ಲಕ್ಷ ಅಂಗಗಳು ರೋಗಿಗಳಿಗೆ ಬೇಕಾಗುತ್ತವೆ. ಒಬ್ಬ ಮೃತ ದಾನಿಯು ಅಂಗಾಂಗ ದಾನದ ಮೂಲಕ 8 ಜೀವಗಳನ್ನು ಉಳಿಸಬಹುದು ಮತ್ತು 75 ಇತರರ ಜೀವನವನ್ನು ಸುಧಾರಿಸಬಹುದು. (ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ಕರುಳು) ಮತ್ತು ಅಂಗಾಂಶಗಳು (ಕಾರ್ನಿಯಾ, ಚರ್ಮ, ಮೂಳೆಗಳು, ಕವಾಟಿಗಳು) ನಂತಹ ಅಂಗಗಳನ್ನು ದಾನ ಮಾಡಬಹುದು. ಮಾನವ ಅಂಗಾಂಗ ದಾನ ಮತ್ತು ಅದರ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವುದು ಈ ವಾಕಥಾನ್ ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು
ಸುದ್ದಿಗೋಷ್ಟಿ ಯಲ್ಲಿ ಆರ್ಜಿಯುಎಚ್ಎಸ್ ಸಿಂಡಿಕೇಟ್ ಸದಸ್ಯ ಡಾ.ಯೋಗಾನಂದರೆಡ್ಡಿ, ಬಿಎಂಸಿಆರ್ಸಿಯ ಪ್ರಾಂಶುಪಾಲ ಡಾ. ಎನ್. ಮಂಜುನಾಥ್, ಡಾ.ಭಾರತಿ, ಡಾ.ಷಡ್ರಕ್, ಡಾ.ಸೋಮಶೇಖರ್, ಡಾ.ಸುಮಾ ಮೊದಲಾದವರು ಇದ್ದರು.


















