(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,16- ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ನ. ಉದ್ಘಾಟನೆ ಹಾಗು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಪಾಲ್ಗೊಳ್ಳುವಿಕೆಗಾಗಿ ಜಂಗಮರ ಜಾಗೃತಿ ಸಮಾವೇಶ ನಾಡಿದ್ದು ಸೆ.18 ರಂದು ಬೆಳಿಗ್ಗೆ 11 ಗಂಟೆಗೆ ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಂಡಿದೆಂದು ಪರಷತ್ ನ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಹೇಳಿದ್ದಾರೆ.
ಅವರು ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು. ಜಾತಿ ಪಟ್ಟಿಯಲ್ಲಿ ಜಂಗಮರು, ವೀರಶೈವ ಲಿಂಗಾಯತ ಜಂಗಮರು, ವೀರಶೈವ ಜಂಗಮರು ಎಂದು ಸೇರಿಸಲು 150 ಜನರು ತಕರಾರು ಅರ್ಜಿ ಸಲ್ಲಿಸಿ ಮನವಿ ಮಾಡಿತ್ತು.
ಈ ಹಿನ್ನಲೆಯಲ್ಲಿ ತಕರಾರರನ್ನು ಆಯೋಗ ಪರಿಗಣಿಸಿ ಜಂಗಮರು, ವೀರಶೈವ ಲಿಂಗಾಯತ ಜಂಗಮರು, ವೀರಶೈವ ಜಂಗಮರು ಎಂದು ನಮೂದಿಸಿದೆ.
ಜಂಗಮರು ಖಾನಾವಳಿ, ಹೊಟೇಲ್ , ಕೂಲಿ, ಅಡುಗೆ ಮಾಡುವ ಮೊದಲಾದ ಕೆಲಸ ಮಾಡಿ ಬದುಕುತ್ತಿದೆ. ಆರ್ಥಿಕವಾಗಿ ಹಿಂದುಳಿದಿದೆ. ಅದಕ್ಕಾಗಿ ಸೆ.22 ರಿಂದ ನಡೆಯುವ ಸಾಮಾಜಿಕ, ಶೈಕ್ಷಣಿಕ ಜನಗಣತಿ ಮುಖ್ಯವಾಗಿದೆ.
ಅದಕ್ಕಾಗಿ ನಾವು ಧರ್ಮ, ಜಾತಿ ಕಾಲಂನಲ್ಲಿ ಏನೆಂದು ಬರೆಸಬೇಕು ಎಂಬ ಬಗ್ಗೆ ಚರ್ಚಿಸಲಿದೆ. ಅಲ್ಲದೆ ಬೇಡ ಜಂಗಮ ಎಂದು ಬರೆಸುವುದರಿಂದ ಉಪಯೋಗವಿಲ್ಲ. ಅದಕ್ಕಾಗಿ ಅದನ್ನು ಬರೆಸಬಾರದೆಂದು ಸಮಾವೇಶದಲ್ಲಿ ತಿಳಿಸಲಿದೆಂದರು.
ಸುದ್ದಿಗೋಷ್ಠಿಯಲ್ಲಿ ಜಂಗಮ ಸಮುದಾಯದ ಮುಖಂಡರುಗಳಾದ ಎಣ್ಣೆ ಎರ್ರಿಸ್ವಾಮಿ ಬೂದಿಹಾಳ್ ಮಠ್, ರೇಣುಕಾ ಪ್ರಸಾದ್, ವಿ.ಎಸ್.ಪ್ರಭಯ್ಯ, ಹೆಚ್.ಕೆ.ಗೌರಿಶಂಕರ್ ಸ್ವಾಮಿ, ಕೆ.ಎಂ.ಕೊಟ್ರೇಶ್, ವಿಭೂತಿ ಎರ್ರಿಸ್ವಾಮಿ, ಹೆಚ್.ಎಂ.ಕಿರಣ್ ಕುಮಾರ್, ಹೆಚ್.ಎಂ.ಚಂದ್ರಮೌಳಿ.ಆರ್.ಹೆಚ್.ಎಂ.ಚನ್ನಬಸಯ್ಯ ಮೊದಲಾದವರು ಇದ್ದರು






















