ನಾಗೇಂದ್ರಗೆ ಸಿಬಿಐ ಸಂಕಷ್ಟ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.02:
ಇಲ್ಲಿನ ಗ್ರಾಮೀಣ ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಈಗ ಸಿಬಿಐ ಸಂಕಷ್ಟ ಎದುರಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ.
ಕಳೆದ ಲೋಕಸಭಾ ಚುನಾವಣೆ ಮುನ್ನ ನಡೆದ ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಾಂತರ ರೂಗಳ ಹಣದ ದುರ್ಬಳಕೆ ವಿರುದ್ದ ನಾಗೇಂದ್ರ ವಿರುದ್ದ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ರಾಜ್ಯದ ಲೋಕಾಯುಕ್ತದ ಎಸ್ ಐಟಿ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಇಡಿ(ಜಾರಿ‌ ನಿರ್ದೇಶನಾಲಯ) ಬಂಧನ‌ ಮಾಡಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಅಲ್ಲದೆ ಇದು ಎರೆಡು ರಾಜ್ಯಗಳಲ್ಲಿ ನಡೆದಿರುವ ಪ್ರಕರಣ ಆಗಿರುವುದರಿಂದ ಸಿಬಿಐ ತನಿಖೆಗೆ ನೀಡಲು ಹೈ ಕೋರ್ಟ್ ಮೊರೆ ಹೋಗಲಾಗಿತ್ರು.
ನಿನ್ನೆ ಹೈ ಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ. ಎಲ್ಲಾ ದಾಖಲೆಗಳನ್ನು ಸಿಬಿಐಗೆ ನೀಡುವಂತೆ ಎಸ್ ಐಟಿಗೆ ಸೂಚಿಸಿದೆ.
ಇದರಿಂದಾಗಿ ಮತ್ತೆ ಸಚಿವ ಸಂಪುಟ ಸೇರಬೇಕೆಂಬ ನಾಗೇಂದ್ರ ಅವರ ಬಯಕೆಗೆ ತಣ್ಣೀರು ಎರಚಿದಂತೆ ಆಗಿದೆ.