‘ನವಶಕಿ ೨೦೨೫’ ಕಾರ್ಯಕ್ರಮ

ಸಬಲೀಕರಣವು ಕೇವಲ ಮಹಿಳೆಯರ ಬಗ್ಗೆ ಅಲ್ಲಅದು ಪುರುಷರ ಬಗ್ಗೆಯೂ ಸಮಾನಾವಾಗಿದೆ.ಎರಡೂ ಲಿಂಗಗಳು ಸಮತೋಲನವನ್ನು ಕಂಡುಕೊಳ್ಳಬೇಕು ಎಂದು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಪಕಿ ಮತ್ತು ಮುಖ್ಯಸ್ಥೆಡಾ ಸುಪ್ರಿಯಾ ಹೆಗ್ಡೆ ಆರೂರ್‌ಅವರು ಹೇಳಿದರು.
ಕೊಡಿಯಾಲ್ ಬೈಲ್‌ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನಎಕ್ಸ್‌ಪೋಡಿಯಂನಲ್ಲಿ ನಡೆದ‘ನವಶಕ್ತಿ೨೦೨೫’ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ನವಶಕ್ತಿ ಕಾರ್ಯಕ್ರಮವನ್ನುಡಾ.ಸುಪ್ರಿಯಾ ಹೆಗ್ಡೆ ಆರೂರ್, ಡಾ.ಉಷಾಪ್ರಭಾಎನ್ ನಾಯಕ್, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ರಶ್ಮಿ, ಉಪನ್ಯಾಸಕಿ ಶ್ರೀಮತಿ ವಿದ್ಯಾಪ್ರಭು, ಶ್ರೀಮತಿ ರಜನಿ, ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ರಮ್ಯಾ ಅನಿಲ್, ಹಿಂದಿ ವಿಭಾಗದಉಪನ್ಯಾಸಕಿ ಶ್ರೀಮತಿ ಅಶ್ವಿನಿ ಪೈ, ಕಛೇರಿ ಸಿಬ್ಬಂದಿ ಶ್ರೀಮತಿ ಸೌಮ್ಯ, ಶ್ರೀಮತಿ ಸರಿತಾ ಹೀಗೆ ನವರಾತ್ರಿಯ ಹಿನ್ನಲೆಯಲ್ಲಿಒಂಬತ್ತು ಮಹಿಳೆಯರು ನವದೀಪಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯಅಧ್ಯಕ್ಷ ಪ್ರೊ.ನರೇಂದ್ರಎಲ್ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ವೇದಿಕೆಯಲ್ಲಿಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಐಟಿ ನಿರ್ದೇಶಕ ಶ್ರೀ ಅಂಕುಶ್‌ಎನ್ ನಾಯಕ್, ಸಂಸ್ಥೆಯಅರ್ಕಿಟೆಕ್ಟ್ ದೀಪಿಕಾ ಎ.ನಾಯಕ್ ಉಪಸ್ಥಿತರಿದ್ಧರು. ಎಕ್ಸ್‌ಪರ್ಟ್‌ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ನವದೀಪಗಳನ್ನು ಹಚ್ಚುವ ಮೂಲಕ ಮತ್ತು ಹೊಸ ಅಕ್ಕಿಯನ್ನುತುಂಬುವ, ಸಿರಿಯನ್ನು ಅರಳಿಸುವ ಬಣ್ಣದ ಕೊಡೆಗಳ ಮೆರವಣಿಗೆ ಹೀಗೆ ನವಶಕ್ತಿ ಕಾರ್ಯಕ್ರಮದ ವರ್ಣರಂಜಿತಉದ್ಘಾಟಿಸುವ ಶೈಲಿಯುಎಲ್ಲರ ಗಮನ ಸೆಳೆಯಿತು.ರಿಷಿಕ್ ಮತ್ತು ಶ್ರದ್ದಾಅಜಿತ್ ಮಿಸ್ಟರ್ ಮತ್ತು ಮಿಸ್‌ಎಕ್ಸ್-ವೋಗ್ ವಿಜೇತರಾಗಿ ಹೊರಹೊಮ್ಮಿದರು. ಕಾರ್ಯಕ್ರಮ ನಿರ್ದೇಶಕಿಶ್ರೀಮತಿಭುವನೇಶ್ವರಿಅವರುಧನ್ಯವಾದಗಳನ್ನುಅರ್ಪಿಸಿದರು.
ನವರಾತ್ರಿ ಹಬ್ಬದ ಸಂದಂರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದಆಚರಿಸುತ್ತೇವೆ. ನಮ್ಮಲ್ಲಿರುವ ದೌರ್ಬಲ್ಯಗಳನ್ನು ತೊಡೆದುಹಾಕಿ ನಮಗೆ ನಾವೇ ಮನೋವೈದ್ಯರಾಗಿ ನಮ್ಮಲ್ಲಿರು ಮನಸ್ಸನ್ನು ಜಾಗ್ರತಗೊಳಿಸಿ ನಿರಂತರ ಪ್ರಯತ್ನದ ಮೂಲಕ ಸಾಧನೆಯ ಪಥವನ್ನುತಲುಪಬೇಕುಎಂದುಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದಪ್ರೊ ನರೇಂದ್ರಎಲ್ ನಾಯಕ್‌ಅವರು ಹೇಳಿದರು.
ಪ್ರತಿಯೊಬ್ಬ ಮನುಷ್ಯನೊಳಗಿರುವ ದ್ವಂದ್ವತೆಯ ಬಗ್ಗೆ ಪ್ರಸ್ತಾಪಿಸುವ ಮೂಲಕ ದುರ್ಬಲ ಭಾಗವು ನಮ್ಮನ್ನು ಭಾರವಾಗಿಸಬಹುದು, ಆದರೆ ಬಲವಾದ ಭಾಗವುಯಾವುದೇ ಅಡೆತಡೆಗಳಿದ್ದರೂ ಅದನ್ನು ನಿವಾರಿಸುವ ಶಕ್ತಿಯನ್ನು ನೀಡುತ್ತದೆಎಂದರು.ಅಸುರ ಅಂಶವು ನಮ್ಮೊಳಗಿರುವ ನಕಾರಾತ್ಮಕ ಅಂಶಗಳನ್ನು ಪ್ರತಿನಿಧಿಸುತ್ತದೆ. ಸಮಾಜದ ಒಳಿತಿಗಾಗಿ ನಮ್ಮಲ್ಲಿರುವ ದುರ್ಗಣಗಳನ್ನು ಜಯಿಸಬೇಕುಎಂದುಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯಉಪಾಧ್ಯಕ್ಷೆಡಾ.ಉಷಾಪ್ರಭಾಎನ್ ನಾಯಕ್ ಹೇಳಿದರು.
೨೫ಎಸ್‌ಯುಎಲ್-ಪಂಜ ನವರಾತ್ರಿ
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ
ಸುಳ್ಯ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಧಾರ್ಮಕ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ನಡೆಯಿತು. ಸಂಜೆ ಭಜನಾ ಸಂಕೀರ್ತನೆ, ರಾತ್ರಿ ಕಲಾ ಸೇವೆ ನಡೆಯಿತು. ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇವರಿಂದ ಭಜನೆ ನಡೆಯಿತು.ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ ಕುಣಿತ ಭಜನೆ ನಡೆಯಿತು. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.