Home ಜಿಲ್ಲೆ ನಂದಗಾAವ್‌ನಲ್ಲಿ -ಸೌರ ದೀಪಗಳ ಅಳವಡಿಕೆ, ಪ್ರಗತಿಪರ ರೈತರಿಗೆ ಪ್ರಶಸ್ತಿ ವಿತರಣೆ

ನಂದಗಾAವ್‌ನಲ್ಲಿ -ಸೌರ ದೀಪಗಳ ಅಳವಡಿಕೆ, ಪ್ರಗತಿಪರ ರೈತರಿಗೆ ಪ್ರಶಸ್ತಿ ವಿತರಣೆ

ಸಂಜೆ ವಾಣಿ ವಾರ್ತೆ |
ಬನಹಟ್ಟಿ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾAವ್ ಗ್ರಾಮದಲ್ಲಿ ಕೊರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಗೋರಮೋರ್ ಗ್ರಾಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ರೈತರೊಂದಿಗೆ ನಿರಂತರ ಸಂಪರ್ಕ ಬೆಳೆಸುವುದು, ಆಧುನಿಕ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವುದು ಹಾಗೂ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಎಪಿಎಂಸಿ ಅಧ್ಯಕ್ಷರು, ರೈತ ಮುಖಂಡರು ಹಾಗೂ ಕೊರಮಂಡಲ್ ಸಂಸ್ಥೆಯ ವಲಯ ವ್ಯವಸ್ಥಾಪಕರಾದ ರಂಜಿತ್ ಕುಮಾರ್ ಜಿ.ಟಿ., ಹಿರಿಯ ಕೃಷಿ ತಜ್ಞರಾದ ಪ್ರಶಾಂತ್ ಟಿ., ಮಾರಾಟಾಧಿಕಾರಿಗಳಾದ ಚಂದ್ರಶೇಖರ ಪತ್ತಾರ್, ಕೃಷಿ ತಜ್ಞರಾದ ಸುನಿಲ್ ಕುಮಾರ್ ಕೆ.ಆರ್., ಸಂಸ್ಥೆಯ ತಂಡದ ಸದಸ್ಯರು ಮತ್ತು ಅಧಿಕೃತ ವಿತರಕರು ಭಾಗವಹಿಸಿದ್ದರು.
ಗ್ರಾಮದಲ್ಲಿ ಸೌರ ದೀಪಗಳ ಅಳವಡಿಕೆ ಗೋರಮೋರ್ ಗ್ರಾಮ ಯೋಜನೆಯ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ನಂದಗಾAವ್ ಗ್ರಾಮದಲ್ಲಿ ಸೌರ ದೀಪಗಳನ್ನು ಅಳವಡಿಸುವ ಮೂಲಕ ಗ್ರಾಮೀಣ ಪ್ರದೇಶದ ಬೆಳಕಿನ ವ್ಯವಸ್ಥೆಗೆ ಸಂಸ್ಥೆ ಕೊಡುಗೆ ನೀಡಿತು. ಗ್ರಾಮೀಣ ಸಮುದಾಯದ ಕಲ್ಯಾಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ಹಾಗೂ ಪ್ರಗತಿಪರ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಋತುಮಾನ ಆಧಾರಿತ ರೈತ ಪ್ರಶಸ್ತಿಗಳನ್ನು ವಿತರಿಸಲಾಯಿತು. ಇದರೊಂದಿಗೆ ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ರೈತರ ಆರ್ಥಿಕ ಪ್ರಗತಿ, ಕೃಷಿ ಉತ್ಪಾದಕತೆಯ ಹೆಚ್ಚಳ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ನೀಡುವುದು ಕೊರಮಂಡಲ್ ಸಂಸ್ಥೆಯ ಪ್ರಮುಖ ಆಶಯವಾಗಿದೆ. ಗೋರಮೋರ್ ಗ್ರಾಮ ಯೋಜನೆಯ ಮೂಲಕ ಕೃಷಿ ಅಭಿವೃದ್ಧಿಯ ಜತೆಗೆ ಗ್ರಾಮೀಣ ಸಮುದಾಯದ ಕಲ್ಯಾಣಕ್ಕೂ ಒತ್ತು ನೀಡಲಾಗುತ್ತಿದೆ.
ರೈತರ ಏಳಿಗೆ, ಸುಸ್ಥಿರ ಕೃಷಿ ಮತ್ತು ಸಮೃದ್ಧ ಗ್ರಾಮ ಎಂಬ ಆಶಯದೊಂದಿಗೆ ಗೋರಮೋರ್ ಗ್ರಾಮ ಯೋಜನೆಯು ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಿಟ್ಟಿದೆ.