
ಹಾಸನ.ಜ.4:– ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರು ಬೇರೆಯವರ ಜಾಗದಲ್ಲಿ ನಿರ್ಮಿಸಿದ್ದಾರೆ ಎನ್ನಲಾದ ಕಾಂಪೌಂಡ್‍ನ್ನು ಧ್ವಂಸಗೊಳಿಸಲಾಗಿದೆ.
ನಗರದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇದೆ. ಇವರು ನಿರ್ಮಿಸಿದ್ದ ಕಾಂಪೌಂಡ್‍ನ್ನು ಮೂಲ ಮಾಲೀಕ ಧ್ವಂಸಗೊಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದಾರೆ.1.500 ಅಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪ ಇವರ ಮೇಲಿದೆ. ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿದೆ.
ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಲಾಗಿತ್ತು. ಸುಮಾರು 1.500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಮಾಲೀಕ ದೇವರಾಜು ಕಿಡಿಕಾರಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಜಿಪಿಎ ಹೋಲ್ಡರ್ ಅಕ್ರಮ ಕಾಂಪೌಂಡ್ ತೆರವುಗೊಳಿಸಿದ್ದಾರೆ.
ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಲಾಗಿತ್ತು. ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಮಾಲೀಕ ದೇವರಾಜು ಕಿಡಿಕಾರಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಜಿಪಿಎ ಹೋಲ್ಡರ್ ಅಕ್ರಮ ಕಾಂಪೌಂಡ್ ತೆರವುಗೊಳಿಸಲಾಗಿದೆ.
ಹಾಸನ ಹಿರಿಯ ಜೆಎಂಎಫ್‍ಸಿ ನ್ಯಾಯಾಲಯ ದೇವರಾಜ್ ಪರವಾಗಿ ಆದೇಶ ಮಾಡಿದ್ದಾರೆ. ಹಲವಾರು ಬಾರಿ ಕೋರ್ಟ್ ಸಮನ್ಸ್ ಹೊರಡಿಸಿದರೂ ಯಶ್ ತಾಯಿ ಕೋರ್ಟ್ ಗೆ ಬಾರದೆ ಇದ್ದು ನ್ಯಾಯಾಲಯಕ್ಕೆ ದಾಖಲೆ ಒದಗಿಸದ ಹಿನ್ನಲೆ ದೇವರಾಜ್ ಪರ ಕೋರ್ಟ್ ಆದೇಶ ಮಾಡಿದೆ. ಅಕ್ರಮವಾಗಿ ಗೋಡೆ ನಿರ್ಮಿಸಿದ್ದರು ಎಂದು ಜಾಗದ ಮಾಲೀಕರು ಗಂಭೀರ ಆರೋಪ ಮಾಡಿದ್ದಾರೆ.
ಆರೋಪ ನಿರಾಕರಣೆ:
ವಿದ್ಯಾನಗರದಲ್ಲಿರುವ ನಿವೇಶನದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎನ್ನೋ ಆರೋಪವನ್ನ ಯಶ್ ತಾಯಿ ಪುಷ್ಪಾ ತಳ್ಳಿಹಾಕಿದ್ದಾರೆ. ತೆರವುಗೊಳಿಸಿದವರ ವಿರುದ್ಧ ಹಾಗೂ ಪಿಡಿಓ ನಟರಾಜ್ ವಿರುದ್ಧ ಕೆಂಡಕಾರಿದ್ದಾರೆ.
ಯಾರ ಖಾಲಿ ನಿವೇಶನ ಇರುತ್ತದೆಯೋ ಹುಡುಗರನ್ನ ಬಿಟ್ಟು ಹೀಗೆ ಮಾಡಿದಾರೆ ಹಣಕ್ಕಾಗಿ ನಮ್ಮ ಒತ್ತಡ ತರಲಾಗಿತ್ತು. ಕೋರ್ಟ್ ಆದೇಶ ಎನ್ನುತ್ತಿರುವುದು ಸುಳ್ಳು. ನಾವು ಊರಲ್ಲಿ ಇಲ್ಲದೇ ಇರುವ ಸಮಯ ನೋಡಿ ಈ ಕೆಲಸ ಮಾಡಿದ್ದಾರೆ. ಯಶ್ ಅವರ ಕಾಪೌಂಡ್ ಹೊಡೆದುಹಾಕಿ ಹೀರೋ ಆಗಲು ಹೊರಟಿದ್ದಾರೆ. ನಾನು ಕೋರ್ಟ್‍ಗೆ ಹಾಜರಾಗಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಮ್ಮ ವಕೀಲರು ಹಾಜರಾಗಿದ್ದಾರೆ. ನಮ್ಮ ಪಕ್ಕದ ನಿವೇಶನ ವರಿಗೂ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಾ ಅರುಣ್ ಕುಮಾರ್ ಆರೋಪಿಸಿದ್ದಾರೆ.

























