ನಟಿ ಉಮಾಶ್ರೀ ಹೆಸರಿನಲ್ಲಿ ರಂಗಭೂಮಿ ಪ್ರಶಸ್ತಿ ಸ್ಥಾಪನೆಗೆ ಕೃಷ್ಣಯ್ಯ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ನ.02:-
ಉಮಾಶ್ರೀರವರ ಹೆಸರಿನಲ್ಲಿ ರಾಜ್ಯಮಟ್ಟದ ರಂಗಭೂಮಿ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಕೃಷ್ಣಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಾಗೂ ಕನ್ನಡ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ಪತ್ರ ಬರೆದಿರುವ ಅವರು ಭಾರತೀಯ ರಂಗಭೂಮಿಯು ಶಾಸ್ತ್ರೀಯ ಮತ್ತು ಸಂಪ್ರದಾಯಿಕ ಅವಧಿಗಳನ್ನು ಹೊಂದಿರುವ ಸರಿಸುಮಾರು 5 ವರ್ಷಗಳ ಇತಿಹಾಸವನ್ನು ಹೊಂದಿದೆ. 15 ಮತ್ತು 16ನೇ ಶತಮಾನದಲ್ಲಿ ಜಾನಪದ ರಂಗಭೂಮಿ ಬಲವಾಗಿ ಹೊರಹೊಮ್ಮಿತು. ಅಂತೆಯೇ ಕನ್ನಡರಂಗ ಭೂಮಿಯು 1869 ರಲ್ಲಿ ಧಾರವಾಡದ ಮದಿಹಾಳದಲ್ಲಿ ಪ್ರಾಚ್ಯ ಕ್ರೀಡಾ ಸಂವರ್ಧಕ ಮಂಡಳಿ ಮೊದಲ ಹವ್ಯಾಸಿ ರಂಗಸಂಸ್ಥೆಯಾಗಿ ನಂತರ ಅನೇಕ ದಿಗ್ಗಜ ಕಲಾವಿದರು ಕನ್ನಡ ರಂಗಭೂಮಿಯನ್ನು ಬೆಳೆಸಿದರು ಕನ್ನಡ ರಂಗಭೂಮಿಯ ಪರಂಪರೆ ಅತಿ ಪ್ರಾಚೀನವಾದದ್ದು ಎಂಬುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.


ರಂಗಭೂಮಿ ಪ್ರಕಾರಗಳಲ್ಲಿ ಬೊಂಬೆಯಾಟ, ತೊಗಲುಗೊಂಬೆಯಾಟ ಬಯಲಾಟ, ದಶಾವತಾರ , ಎಂದು ಕರೆಯುವ ಯಕ್ಷಗಾನದ ಆಟಗಳು ಪ್ರಮುಖವಾಗಿವೆ. ಅಭಿನಯ ಎಲ್ಲಾ ಕಲಾ ಪ್ರಕಾರಗಳಲ್ಲಿ ಮಹತ್ವದ ಮನ್ನಣೆ ಪಡೆದಿರುವ ಪ್ರಮುಖ ಕಲೆಯಾಗಿದೆ ಕರ್ನಾಟಕ ರಂಗಭೂಮಿ ಎಂದಾಕ್ಷಣ ನೀನಾಸಂ, ರಂಗಾಯಣ, ರಂಗಶಂಕರ,ಗುಬ್ಬಿ ವೀರಣ್ಣ ನಾಟಕ ಕಂಪನಿ,ಬೆನಕ, ಹಲವು ಹೆಸರುಗಳು ನೆನಪಿಗೆ ಬರುತ್ತವೆ.
ಅಂತೇಯೇ ಹಲವಾರು ಕಲಾವಿದರು ಸುದೀರ್ಘವಾಗಿ ಈ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಮುಂದಿನ ಪೀಳಿಗೆಗೆ ಹಾಗೂ ಪ್ರಸ್ತುತವಾಗಿ ರಂಗಾಯಣದಲ್ಲಿರುವವರನ್ನು ಪೆÇ್ರೀತ್ಸಾಹಿಸಲು ಕನ್ನಡ ಸಿನಿಮಾಗಳ ನಟಿಯಾಗಿ ಬಹು ಜನಪ್ರಿಯತೆಗಳಿಸಿರುವ ಉಮಾಶ್ರೀಯವರು ರಂಗಭೂಮಿಯಲ್ಲಿ ಅಭಿನೇತ್ರಿಯಾಗಿ ಮಿಂಚಿದವರು. ಇವರು ನಟಿಸಿದ ಒಡಲಾಳ ನಾಟಕದ ಸಾಕವ್ವನ ಅಭಿನಯ ಅವರನ್ನು ಬಹು ಜನಪ್ರಿಯರನ್ನಾಗಿಸಿತು. ಗುಲಾಬಿ ಟಾಕೀಸ್ ಸಿನಿಮಾದಲ್ಲಿ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯು ಸಹ ಬಂದಿದೆ ಎಂದರು.


ಇವರ ಸೇವೆಯನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪ್ರಸ್ತುತ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ರಂಗಕರ್ಮಿಗಳಿಗೆ ಉಮಾಶ್ರೀ ಅವರ ಹೆಸರಿನಲ್ಲಿ ಒಂದು ಲಕ್ಷ ರೂಗಳನ್ನು ಒಳಗೊಂಡ ರಾಜ್ಯಮಟ್ಟದ ರಂಗಭೂಮಿ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಿ ರಂಗಭೂಮಿ ಕಲಾವಿದರನ್ನು ಪೆÇ್ರೀತ್ಸಾಹಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.