ನಗರ ಶಾಸಕರಿಂದ ಮನೆ ಮನೆಗೆ ಕಿಚನ್ ಕಿಟ್ ವಿತರಣೆಗೆ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.26:
ಚುನಾವಣಾ ಪೂರ್ವದಲ್ಲಿ ನಗರ ವಿಧಾನ ಸಭಾ ಕ್ಷೇತ್ರದ ಮನೆ ಮನೆಗೆ ಕುಕ್ಕರ ವಿತರಿಸಿದ್ದ
ನಗರ ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಜನ್ಮ ದಿನದ ಹಿನ್ನೆಲೆಯಲ್ಲಿ ನಿನ್ನೆ ಮನೆ ಮನೆಗೆ ಕಿಚನ್ ಕಿಟ್ ವಿತರಿಸುವ ಕಾರ್ಯಕ್ಕೆ ನಗರದ 23ನೇ ವಾರ್ಡಿನ ನಾಗಪ್ಪನ ಕಟ್ಟೆ ಬಳಿ ಚಾಲನೆ ನೀಡಿದ್ದಾರೆಮ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ನಗರ ಕ್ಷೇತ್ರದ ಸುಮಾರು ಒಂದು ಲಕ್ಷದ ಹತ್ತು ಸಾವಿರ ಕುಟುಂಬಗಳಿಗೆ ಕಿಚನ್ ಕಿಟ್ ವಿತರಣೆ ಮಾಡಲಾಗುವುದು ಕಳೆದ ವರ್ಷವೇ ಗಿಫ್ಟ್ ನೀಡಬೇಕಿತ್ತು ಕಾರಣಾಂತರಗಳಿಂದ ಆಗಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮುಂತಾದ ಸಮಸ್ಯೆ ಪರಿಹ ರಿಸುವ ಭರವಸೆ ನೀಡಿತ್ತು, ನಾವು ಏನೇನು ಭರವಸೆ ಈಡೇರಿಸಿದ್ದೇವೆ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬ ಸ್ಟಿಕ್ಕರ್ ಪ್ರತಿ ಮನೆಗೂ ಅಂಟಿಸುತ್ತೇವೆ ಎಂದಿದ್ದಾರೆ..
ಬರುವ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಗಡಿಗಿ ಚನ್ನಪ್ಪ ವೃತ್ತ ಕಾಮಗಾರಿ ಪೂರ್ಣವಾಗಿದೆ, ರಸ್ತೆ ಕಾಮಗಾರಿ ಕೆಲಸ ಸ್ವಲ್ಪ ಬಾಕಿ ಇದೆ, ಇನ್ನೊಂದು ಹತ್ತು ದಿನಗಳಲ್ಲಿ ಉದ್ಘಾಟನೆ ಮಾಡಲಾಗುವುದು. ವಾಲ್ಮೀಕಿ ವೃತ್ತದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ, ಈ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಿ ಅದಷ್ಟು ಬೇಗ ವೃತ್ತವನ್ನು ಉದ್ಘಾಟನೆ ಮಾಡಲಿದೆ. ಬರುವ ಆರು ತಿಂಗಳಲ್ಲಿ ಎಲ್ಲಾ ಕೆಲಸ ಪೂರ್ಣಗೊಳ್ಳಲಿದೆ , ಬಳ್ಳಾರಿಯಲ್ಲಿನ ಎಲ್ಲಾ ರಸ್ತೆಗಳು ಹೊಸ ರಸ್ತೆಗಳಾಗಿ ಮಾರ್ಪಾಡಾಗುತ್ತವೆ ಎಂದಿದ್ದಾರೆ.
ನಾನು ವೈಯಕ್ತಿಕವಾಗಿ ಬ್ಯಾನರ್ ಹಾಕುವಂತೆ ಹೇಳಿಲ್ಲ,
ಅಭಿಮಾನಿಗಳು ಖುಷಿಯಿಂದ ಹಾಕಿದ್ದಾರೆ, ಅದಕ್ಕೆ ನಾನು ಏನು ಹೇಳೋಕೆ ಆಗಲ್ಲ ಎಂದಿರುವ ಅವರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತನಾಡುವಷ್ಟು ದೊಡ್ಡವನಲ್ಲ, ಹೈ ಕಮಾಂಡ್ ಏನು ಹೇಳಿದ್ರು ಅದಕ್ಕೆ ನಾನು ಬದ್ಧ. ನಾಗೇಂದ್ರ ಅವರು ಮಂತ್ರಿ ಆಗೇ ಆಗುತ್ತಾರೆ ಅದರಲ್ಲಿ ಅನುಮಾನ ಇಲ್ಲ, ಅಂತಹ ಶುಭ ಘಳಿಗೆ ಬಂದೇ ಬರುತ್ತದೆ ಕಾಯಬೇಕು ಅಷ್ಟೇ ಎಂದಿದ್ದಾರೆ.
ಈ ಸಂದರ್ಭ ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ಪ್ರಭಂಜನಕುಮಾರ್, ಗಾದೆಪ್ಪ, ಮಿಂಚು ಸೀನಾ, ರಾಮಾಂಜನೇಯ, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು ಮೊದಲಾದವರು ಇದ್ದರು. .