
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಜು3: ಈ ವರೆಗೂ ಯಾರಿಂದಲೂ ಸಹಾಯ ಪಡೆಯದ ವಿಕಲಚೇತನರಿಗೆ ನಗರಸಭೆ ನೀಡುವ ಯಂತ್ರಚಾಲಿತ ವಾಹನಗಳನ್ನು ನೀಡಬೇಕು ಎಂದು ವಿಕಲಚೇತನರ ಸಂಘಟನೆಯ ಹೊಸಪೇಟೆ ನಗರ ಘಟಕದ ಪದಾಧಿಕಾರಿಗಳು ಹೊಸಪೇಟೆ ನಗರಸಭೆಯ ಪೌರಾಯುಕ್ತರು ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ.
ಬುಧುವಾರ ನಗರಸಭೆಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅಧ್ಯಕ್ಷರಾದ ರೂಪೇಶ್‍ಕುಮಾರ ಹಾಗೂ ಪೌರಾಯುಕ್ತ ಚಂದ್ರಪ್ಪರವರನ್ನು ಭೇಟಿ ನೀಡಿ ತಮ್ಮ ಅಹವಾಲು ತೋಡಿಕೊಂಡರು ರಾಜಕೀಯ, ಸಾಮಾಜಿಕ ಸಂಘಟನೆಗಳು ಸೇರಿದಂತೆ ದಾನಿಗಳಿಂದಲೂ ಅನೇಕರು ಯಂತ್ರಚಾಲಿತ ತ್ರೀಚಕ್ರವಾಹನಗಳನ್ನು ಪಡೆದುಕೊಂಡಿದ್ದರು, ಯಾವುದೆ ಕಾರಣಕ್ಕೂ ನಗರಸಭೆ ಶೇಕಡಾ 5ರ ವಿಕಲಚೇತನರಿಗೆ ಮೀಸಲಿಟ್ಟ ಮೋಟಾರ್ ವಾಹನಗಳನ್ನು ನೀಡಬಾರದು ಈ ಬಾರಿ ಎಲ್ಲಾ ಅನುದಾನವೂ ನೈಜ ಹಾಗೂ ಅರ್ಹ ವಿಕಲಚೇತನರಿಗೆ ಮುಟ್ಟುವಂತೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಲೋಹಿತ್ ತಳವಾರ ಉಪಾಧ್ಯ್ಷ ಮೆಹಬೂಬ್ ಬಾಷಾ, ಪಾಂಡುನಾಯ್ಕ್, ತಾಯಣ್ಣ ಹಜರತ್‍ಅಲಿ ದಾದು ಮಾಬಾಷಾ, ಗಂಗಮ್ಮ ಇತರರು ಹಾಜರಿದ್ದರು.