
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.13: ಇಂದಿನಿಂದ ಈ ತಿಂಗಳ 18 ರ ವರೆಗೆ ಐದು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ “ಅಗ್ನಿವೀರ್* ನೇಮಕಾತಿ ಱ್ಯಾಲಿ ಆರಂಭಗೊಂಡಿದೆ.
ರಾಜ್ಯದ 14 ಜಿಲ್ಲೆಗಳ ಯುವಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್, ಸ್ರ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ ಮೆನ್ 10 ಮತ್ತು 8 ನೇ ತರಗತಿ ಪಾಸ್ ಆದ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ 30 ಜೂನ್ 2025 ರಿಂದ 10 ಜುಲೈ 2025 ರವರೆಗೆ ನಡೆದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಪರೀಕ್ಷೆ ಇಲ್ಲಿ ನಡೆಯುತ್ತಿದೆ.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಬೆಂಗಳೂರು ನಗರ , ಬೆಂಗಳೂರು ಗ್ರಾಮೀಣ, ಕೋಲಾರ, ಚಾಮರಾಜನಗರ ಚಿಕ್ಕಬಳ್ಳಾಪುರ, ರಾಮನಗರ, ಕೊಡುಗು, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಿಂದ ಭಾಗವಹಿಸುತ್ತಿದ್ದಾರೆ.
ಪ್ರತಿದಿನ ಬೆಳಿಗ್ಗೆ 4.30 ರಿಂದ. ಪರೀಕ್ಷೆ ಆರಂಭವಾಗುತ್ತಿದೆ. ಮೊದಲು 1.6 ಕಿಲೋ ಮೀಟರ್ ರನ್. ಪುಲ್ಲಪ್, ಜಂಪ್, ಜಿಗ್ ಜಾಗ್, ದೈಹಿಕ್ ಮೆಜರ ಮೆಂಟ್ ನಲ್ಲಿ ಎತ್ತರ, ದೇಹದ ಆಳತೆ, ತೂಕದ ಪರೀಕ್ಷೆ ನಡೆಯಲಿದೆ, ಪ್ರತಿ ಒಂದರಲ್ಲಿ ಪಾಸ್ ಆದರೆ ಮುಂದಿನದಕ್ಕೆ ಅರ್ಹತೆ ದೊರೆಯಲಿದೆ.
ಮದಿನ ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ನಾಳೆ ದಾಖಲೆಗಳ ಪರಿಶೀಲನೆ, ಮಸಡಿದ್ದು ವೈದ್ಯಕೀಯ ಪರೀಕ್ಷೆ ನಡೆಯಲಿದೆ ಎಂದು ಸೇನಾ ನೇಮಕಾತಿ ವಿಭಾಗದ ನಿರ್ದೇಶಕ ಕರ್ನಲ್ ವಿವೇಕ್ ಜಮ್ದಾ ರ್ ಹೇಳಿದ್ದಾರೆ
ನೇಮಕಾತಿಗಾಗಿ ದೂರದಿಂದ ಬರುವ ಅಭ್ಯರ್ಥಿಗಳಿಗೆ ಜಿಲ್ಲಾ ಆಡಳಿತ ಊಟ , ಉಪಹಾರ, ಸಾರಿಗೆ, ಅಗತ್ಯ ಬಿದ್ದವರಿಗೆ ವಸತಿ ವ್ಯವಸ್ಥೆಯನ್ನು ಮಾಡಿದೆ ಇಲ್ಲಿ ಪಾಸ್ ಆದವರಿಗೆ ಬಹುತೇಕ ಡಿಸೆಂಬರ್ ನಿಂದ ಆರು ತಿಂಗಳ ಕಾಲ ತರಬೇತಿ ನಡೆಯಲಿದ್ದು ಇವರ ಸೇವಾ ಅವಧಿ ನಾಲ್ಕುವರ್ಷಗಳು ಮಾತ್ರ ಇರುತ್ತದೆ

























