ನಗರದಲ್ಲಿ 186ನೇ ವಿಶ್ವ ಛಾಯಗ್ರಾಹಣ ದಿನಾಚರಣೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.20
– ನಗರದಲ್ಲಿ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಣೆ ಮಾಡಲಾಯಿತು.
ನಗರದ ಚಾಮರಾಜನಗರ ತಾಲ್ಲೂಕು ಫೆÇೀಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಹಳೆಬಸ್ ನಿಲ್ದಾಣ ಬಳಿ ಇರುವ ಶ್ರೀ ವಿರಭದ್ರೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.


ನಂತರ ವೇದಿಕೆ ಕಾರ್ಯಕ್ರಮವು ಜೋಡಿ ರಸ್ತೆಯಲ್ಲಿರುವ ಹೈಟೆಕ್ ಸಭಾಂಗಣದಲ್ಲಿ ತಾಲೂಕು ಪೆÇೀಟೊಗ್ರಾಫರ್ ಹಾಗು ವಿಡಿಯೋ ಗ್ರಾಫರ್ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪೆÇೀಟೊಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಸಂಘದ ಗೌರವಾಧ್ಯಕ್ಷ ಗಣೇಶ್ ದಿಕ್ಷಿತ್ ಅವರು ಉದ್ಘಾಟಿಸಿ ಮಾತನಾಡಿ, ನಮ್ಮ ಸಂಘವು ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಪ್ರತಿ ವರ್ಷ ಬಹಳ ಯಾಶಸ್ವಿಯಾಗಿ ಅಚರಣೆ ನಡೆಸುತ್ತಾ ಬಂದಿದೆ. ಬೆಂಗಳೂರು, ಮುಂಬಯಿ,ದೆಹಲಿ ಸೇರಿದಂತೆ ವಿಶ್ವಾದ್ಯಂತ 1969 ರಿಂದ ಚಿತ್ರಗಳನ್ನು ಸೆರೆ ಹಿಡಿಯುವದನ್ನು ಮುಂದುವರಿಸುತ್ತಾ ಬಂದಿದ್ದೆವೆ. ಪೆÇಟೊಗ್ರಫಿ ಈಗಿನ ಪಿಳಿಗೆಗೆ ವಿನೂತನ ಕ್ಯಾಮರಾಗಳನ್ನು ತಯಾರು ಮಾಡುತಿದ್ದಾರೆ, ಇದರಿಂದ ಛಾಯಗ್ರಾಹಣ ಮತ್ತಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ಕಾರ್ಮಿಕ ಇಲಾಖೆ ಜಿಲ್ಲಾ ಅಧೀಕ್ಷಕ ರಾಮಚಂದ್ರಯ್ಯ ನೊಂದಣಿಯಾದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡನ್ನು ವಿತರಿಸಿ ನಂತರ ಮಾತನಾಡಿದ ಅವರು ಇ.ಎಸ್.ಐ. ಹೊಂದಿರುವಂತಹ ಕಾರ್ಮಿಕರು ಅಸಂಘಟಿತ ವಲಯಕ್ಕೆ, ಬರುವುದಿಲ್ಲ, ಅಸಂಘಟಿತ ಕಾರ್ಮಿಕ ಸ್ಮಾರ್ಟ್ ಕಾರ್ಡ್ ಹೊಂದಿರುವ ಅರ್ಹ ಪಲಾನುಭವಿ ಅಕಸ್ಮಿಕವಾಗಿ ಮೃತರಾದರೆ, ಸರ್ಕಾರದಿಂದ 1ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಸರ್ಕಾರದಿಂದ ಬರುವಂತಹ ಕಾರ್ಮಿಕರು ಸವಲತ್ತುಗಳನ್ನು ಸದುಪಯೋಗಪಡೆದುಕೊಳ್ಳಿ ಎಂದು ಸಲಹೆ ನೀಡಿದರು.


ಪೆÇೀಟೊಗ್ರಾಫರ್ ಹಾಗು ವಿಡಿಯೋ ಗ್ರಾಫರ್ ಸಂಘದ ಜಿಲ್ಲಾಧ್ಯಕ್ಷ ಮಂಜೇಶ್ ಮಾತನಾಡಿ ನಾವು ತೆಗೆಯುವ ಪೆÇೀಟೊ, ವಿಡೀಯೋ ಚಿತ್ರೀಕರಣ ಸಾಕ್ಷಿಯಾಗುತ್ತದೆ. ಪೆÇೀಟೊಗ್ರಪಿ ನಮ್ಮ ಜೀವನ ನಡೆಸಲು ದಾರಿಯಾಗಿದೆ. ಈ ಹಿಂದೆ ಬ್ಲಾಕ್ ಅಂಡ್ ವೈಟ್ ಇತ್ತು. ಇವಾಗ ಡಿಜಿಟಲ್ ಆಗಿ ಬದಲಾಗಿದೆ, ಪೆÇೀಟೊಗ್ರಪಿ ಮುಂದೆ ಬೆಳೆಯಲು ಜಿಲ್ಲೆಯ ಎಲ್ಲಾ ಛಾಯಗ್ರಾಹಕರ ಸಹಕಾರ ಅಗತ್ಯ ಎಂದು ನುಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ತಾಲ್ಲೂಕು ಅಧ್ಯಕ್ಷ ಕಂಠಿ ತಾಲ್ಲೂಕು ಕಾರ್ಯದರ್ಶಿ ಲೋಕೇಶ್, ಖಜಾಂಚಿ ಪ್ರದೀಪ್, ತಾಲೂಕು ಗೌರವಾಧ್ಯಕ್ಷ ಪ್ರಕಾಶ್, ಸ್ವಾಮಿ.ಡಿ, ಎಮ್.ಸಿ ನಾಗರಾಜು, ಸಂತೋಷಕುಮಾರ್, ಬಾಲರಾಜು, ದಾಸ್, ಕುಮಾರ್, ಸುರೇಂದ್ರ, ಉಮತ್ತೂರು ಚಂದ್ರು, ಹಾಗೂ ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ನಾಗೇಂದ್ರ ಮತ್ತು ಕಾರ್ಯದರ್ಶಿ ಸುರೇಶ್, ಚಾಮರಾಜನಗರ ತಾಲ್ಲೂಕು ಫೆÇೀಟೋಗ್ರಾಫರ್ ಮತ್ತು ವಿಡೀಗ್ರಾಫರ್ ಸಂಘದ ಕಮಿಟಿ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.