ನಗರದಲ್ಲಿ ಮೂರು ದಿನಗಳಸುವರ್ಣ ವಸ್ತ್ರಾಭರಣ ಮೇಳ ಪ್ರಾರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ,27-
ನಗರದ ರಾಯಲ್ ಪೋರ್ಟ್ ಹೊಟೇಲ್ ಆವರಣದಲ್ಲಿ ನಿನ್ನೆಯಿಂದ ಮೂರು ದಿನಗಳ ಸುವರ್ಣ ವಸ್ತ್ರಾಭರಣ ಮೇಳ ಆರಂಭಗೊಂಡಿದೆ.
ಮೇಳಕ್ಕೆ ನಗರದ ಶಾಸಕ ಭರತ್ ರೆಡ್ಡಿ ಚಾಲನೆ ನೀಡಿ. ಇಂತಹ ಮೇಳಗಳು ನಗರದಲ್ಲಿ ನಡೆಯುವ ಮೂಲಕ ಗ್ರಾಹಕರಿಗೆ ಅಗತ್ಯವಾದುದನ್ನು ಖರೀದಿಸಲು ಸಹಕಾರಿಯಾಗುತ್ತದೆಂದರು.
ನಿರ್ವಾಹಕ ಸುಖತೋಷ್ ಮಾತನಾಡಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಿದ್ದಪಡಿಸಲಾದ ಬೆಳ್ಳಿ, ಬಂಗಾರ, ವಜ್ರಗಳ ಆಭರಣಗಳ ಜೊತೆ ಅಧುನಿಕವಾದ ವಸ್ತ್ರಗಳು ಯೋಗ್ಯ ಬೆಲೆಗೆ ದೊರಕುತ್ತಿವೆ ಎಂದರು. ಮೇಳವು ನಿನ್ನೆ, ಇಂದು ಮತ್ತು ನಾಳೆ ಇರಲಿದೆ.