
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.15: ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಇಂದು ಡಿಕಿಶಿ ಅವರ ಬೆಂಲಿಗರು, ಅಭಿಮಾನಿಗಳು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ದುರ್ಗಮ್ಮ ದೇವಸ್ಥಾನದ ಬಳಿ ಆಚರಿಸಲಾಯ್ತು.
ಸ್ವತಃ ಮೇಯರ್ ಪಿ.ಗಾದೆಪ್ಪ ದುರ್ಗಮ್ಮಗೆ ಡಿಕಿಶಿ ಬರ್ತೆಡೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ , 65 ಕಿಲೋ ಕೇಕ್ ಕತ್ತರಿಸಿ ಅಲ್ಲಿಗೆ ಬಂದಿದ್ದ ಬಡ ಜನತೆಗೆ ಉಪಹಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಸಂಸದರು ಈ. ತುಕಾರಾಂ ಮಾತನಾಡಿ, ಡಿಕೆಶಿ ಹುಟ್ಟು ಹಬ್ಬದ ಹಿನ್ನೆಲೆ ವಿಶೇಷ ಪೂಜೆ ಮಾಡಿದ್ದೇವೆ. ಪರೋಕ್ಷವಾಗಿ ಡಿಕೆಶಿ ಸಿಎಂ ಅಗಲಿ ಎಂದು ಅವರ ಇಷ್ಟಾರ್ಥ ನೇರವೇರಲಿ ಎಂದು ಪ್ರಾಥನೆ ಮಾಡಿದ್ದೇವೆಂದ ಅವರು ಕೇರಳ ಮಾದರಿಯಲ್ಲಿ ಹೈಕಮೆಂಡ್ ರಾಜ್ಯದ ಸಮಸ್ಯೆ ಬಗೆಹರಿಸಲಿದ್ದಾರೆ
ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ತಂಗಾಳಿ ಬೀಸಲಿದೆ.
ಜನರು 2028ರವರೆಗೂ ಅಧಿಕಾರ ಕೊಟ್ಟಿದ್ದಾರೆ. ನಾವೆಲ್ಲ ಕುಳಿತು ತೀರ್ಮಾನ ಮಾಡ್ತೇವೆ. ಬೇಸಿಗೆ ಮುಗಿದ ಬಳಿಕ ಮಳೆಗಾಲ ಬರಬೇಕು ಪ್ರಕೃತಿ ಕಾಂಗ್ರೆಸ್ ಪರವಾಗಿದೆ, ನಾನು ಶಾಸಕನಿದ್ದೆ ಪಕ್ಷ ಸಂಸದ ಸ್ಥಾನ ನೀಡಿತುಹೈಕಮೆಂಡ್ ತೀರ್ಮಾನ ದಂತೆ ಎಲ್ಲವೂ ನಡೆಯುತ್ತಿದೆಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಂಜನೇಯಲು ಮಾತನಾಡಿ, ಡಿಕೆಶಿ ಸಿಎಂ ಅಗಲಿ ಎಂದು ಹರಕೆ ಕಟ್ಟಿಕೊಂಡಿದ್ದೇವೆ. ಹರಕೆ ಈಡೇರಿದ ಬಳಿಕ ಮುಡುಪು ಮುಟ್ಟಿಸುತ್ತೇವೆ. ನಮ್ಮ ಹರಕೆ ಏನು ಎನ್ನುವದು ದೇವರಿಗೆ ಮತ್ತು ನಮಗೆ ಗೊತ್ತು. ಶೀಘ್ರದಲ್ಲೇ ಹರಕೆ ಈಡೇರಲಿದೆ ಎಂದರು.
ಸಂಡೂರು ಶಾಸಕಿ ಅನ್ನಪೂರ್ಣಮ್ಮ, ಮೇಯರ್ ಪಿ. ಗಾದೆಪ್ಪ ಅವರುಗಳು ಮಸತನಾಡಿ, ಕೆಳ ಹಂತದಿಂದ ಬಂದು ಪಕ್ಷದ ಸಂಘಟನೆಯಲ್ಲಿ ಸಮರ್ಥವಾಗಿ ತೊಡಗಿಸಿಕೊಂಡು, ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಆಡಳಿತಕ್ಕೆ ತರವಲ್ಲಿ ಮುಖ್ಯರಾದವರು ಡಿ.ಕೆ.ಶಿವಕುಮಾರ್ ಅವರು. ಅವರಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ, ಉನ್ನತ ಸ್ಥಾನಮಾನ ಕರುಣಿಸಲಿ ಎಂದು ಆಶಿಸಿದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಾಯೂನ್ ಖಾನ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಡಿಸಿಸಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್, ಉಪಾಧ್ಯಕ್ಷ ಕೆ. ಶ್ರೀನಿವಾಸಲು, ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ, ಬಗರು ಹುಕುಂ ಸಮಿತಿ ಅಧ್ಯಕ್ಷ ಹೆಚ್. ತಿಮ್ಮನಗೌಡ ಸಿದ್ದಮ್ಮನಹಳ್ಳಿ. ಪಾಲಿಕೆಯ ತೆರೆಗೆ ನಿರ್ಧಾರಣೆ ಹಣಕಾಸು ಮತ್ತು ಅಪಿಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕುಬೇರ, ಸದಸ್ಯ ಮಿಂಚು ಶ್ರೀನಿವಾಸುಲು, , ಸಭಾಧ್ಯಕ್ಷ ಆಸಿಫ್, ಶ್ರೀರಾಮರಾಜು, ಪ್ರಭಾಕರ್, ಜಿ.ಜೆ. ರವಿಕುಮಾರ್, ಯತಿಂದ್ರಗೌಡ, ಬಜ್ಜಪ್ಪ ಬುಜ್ಜಿ, ಬತ್ರಿ ಮಂಜು ಮತ್ತಿತರರು ಇದ್ದರು. .






















