
ಶ್ರೀನಗರ,ಜು.2- ಶ್ರೀನಗರದ ಬಾಲ್ಟಾಲ್ ಯಾತ್ರಾ ಮಾರ್ಗದಿಂದ ಅಮರನಾಥ ಗುಹೆಗೆ ಅಕ್ರಮವಾಗಿ ಹೋಗಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಹರಿಯಾಣ ನಿವಾಸಿ ಶಿವಂ ಮಿತ್ತಲ್ ನಕಲಿ ಯಾತ್ರಾ ಕಾರ್ಡ್ ತೋರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಶಿವಂ ಮಿತ್ತಲ್ ಭದ್ರತಾ ಚೆಕ್‍ಪೆÇೀಸ್ಟ್‍ಗಳನ್ನು ವಂಚಿಸಲು ಪ್ರಯತ್ನಿಸಿದ್ದಾರೆ. ಭದ್ರತಾ ಪಡೆಗಳು ಅವನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ದರ್ಶನಕ್ಕಾಗಿ ನಕಲಿ ಕಾರ್ಡ್ ಮಾಡಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೆÇಲೀಸರು ಆತನನ್ನು ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದಾಗ ಪವಿತ್ರ ಗುಹೆಗೆ ಭೇಟಿ ನೀಡಲು ಈ ನಕಲಿ ಕಾರ್ಡ್ ಮಾಡಿರುವುದಾಗಿ ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಪೆÇಲೀಸರ ಪ್ರಕಾರ, ಆತನ ವಿರುದ್ಧ ಎಫ್‍ಐಆರ್ ಸಂಖ್ಯೆ 13-2025 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೋನಾರ್ಮಾಗ್ ಪೆÇಲೀಸ್ ಠಾಣೆಯ ಉಸ್ತುವಾರಿ ಇದನ್ನು ದೃಢಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ನಕಲಿ ಅಥವಾ ಅಮಾನ್ಯ ಪ್ರಯಾಣ ನೋಂದಣಿ ದಾಖಲೆಗಳನ್ನು ಬಳಸಲು ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕೆಂದು ಪೆÇಲೀಸರು ವಿನಂತಿಸಿದ್ದಾರೆ. ಮಾಹಿತಿಯನ್ನು ಈ ಕೆಳಗಿನ ಸಂಪರ್ಕ ಸಂಖ್ಯೆಗಳಲ್ಲಿ ಹಂಚಿಕೊಳ್ಳಬಹುದು, Pಅಖ ಗ್ಯಾಂಡರ್‍ಬಲ್: 9906668731, 9419371774. ಎPಅಖ ಬಾಲ್ಟಾಲ್: 9541786752, 9484321256. Sಊಔ ಬಾಲ್ಟಾಲ್: 7006017372. Sಊಔ ಸೋನಾಮಾರ್ಗ್: 9797117797. (ಎಏಓS).