
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.30: ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನು ಬಾಹಿರವಾಗಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಳನ್ನು ಬೆರೋಬ್ಬರ ಹೆಸರಿಗೆ ವರ್ಗಾವಣೆ ಆಗುತ್ತಿವೆ. ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿನಲ್ಲಿ ಮಾಡಿಕೊಂಡವರ ಜೊತೆಗೆ ಅಧಿಕಾರಿಗಳು ಸಹ ಶ್ಯಾಮಿಲಾಗಿದ್ದಾರೆ.
ಅಧಿಕಾರಿಗಳವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು
ಬಳ್ಳಾರಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಕ್ರಮ ದಂಧೆಗಳು ನಡೆಯುತ್ತಿವೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಜಮೀನುಗಳನ್ನು ಬೇಕಿದ್ದವರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಬುಡ ಅಧ್ಯಕ್ಷ ಆoಜುನೆಯಲು ಅವರ ನೆತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಅವರ ಆರೋಪದ ಪ್ರಕಾರಣಕ್ಕೆ ಸಂಬಂಧಿಸಿ ಅಧಿಕಾರಿಗಳು ದೂರು ನೀಡಿದ್ದಾರೆ. ಆದರೆ, ಇದಕ್ಕೆ ಶ್ಯಾಮಿಲಾದ ಎಲ್ಲ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮವಹಿಸಲಿಲ್ಲ, ಇದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕಿದೆ.
ಬಳ್ಳಾರಿಯ ಲೋಕೋಪಯೋಗಿ ಇಲಾಖೆ, ಆರ್ ಟಿಓ, ಕಂದಾಯ ಇಲಾಖೆ, ಸರ್ವೇ ಇಲಾಖೆ, ಅಬಕಾರಿ, ಪಾಲಿಕೆಯಲ್ಲೂ ಭ್ರಷ್ಟಚಾರ ಮಿತಿ ಮೀರಿದೆ. ಲಂಚಾವತಾರಕ್ಕೆ ರಾಜ್ಯದಲ್ಲೇ ಬಳ್ಳಾರಿ ಹೆಸರು ವಾಸಿಯಾಗುತ್ತಿದೆ. ಚುನಾಯಿತ ಜನ ಪ್ರತಿನಿದಿನಗಳು ಪಾಲಿನ ಹಣ ಪಡೆದು ತೆಪ್ಪಗೆ ಕುಳಿತರೆ ಸಾಲದು, ಬಳ್ಳಾರಿಯ ಅಭಿವೃದ್ಧಿಗೆ ಶ್ರಮಿಬೇಕು. ಜಿಲ್ಲೆಗೆ ಇಲ್ಲಿವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೆಮಕವಾಗಿಲ್ಲ, ಇದು ಬಹು ದೊಡ್ಡ ದುರಂತ, ಜಿಲ್ಲೆಗೆ ಅಪ್ಪ, ಅಮ್ಮ, ತಂದೆಯೂ ಇಲ್ಲದಂತಾಗಿದೆ. ಈ ರೀತಿ ಆದರೆ ನಮ್ಮ ಜಿಲ್ಲೆಯ ಅಭಿವೃದ್ಧಿ ಹಿನ್ನೆಡೆಯಗಲಿದೆ. ಕೂಡಲೇ ಜಿಲ್ಲಾ ಉಸ್ತುವರಿ ಸಚಿವರ ನೇಮಕಾವಾಗಬೇಕು, ಕಛೇರಿಗಳಲ್ಲಿನ ಭ್ರಷ್ಟಾಚಾರ ನಿಲ್ಲಬೇಕು, ನಿರ್ಲಕ್ಷ ವಹಿಸಿದ ಸಬ್ ರಿಜಿಸ್ಟರ್ ಕಚೇರಿ ಅಧಿಕಾರಿಗಳನ್ನು ಬಂಧಿಸಿ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು, ನಿರ್ಲಕ್ಷ ವಹಿಸಿದರೆ ಜೆಡಿಎಸ್ ನಿಂದ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.























