
ಸಂಜೆವಾಣಿ ವಾರ್ತೆ
ನಂಜನಗೂಡು.ಡಿ.03:- ಶ್ರೀಕಂಠೇಶ್ವರ ದೇವಾಲಯದಲ್ಲಿ ನಾಳೆ ಚಿಕ್ಕ ಜಾತ್ರೆ ಸಂಭ್ರಮ ಸಾವಿರಾರು ಭಕ್ತಾದಿಗಳು ಭಾಗಿ ಚಿಕ್ಕ ಜಾತ್ರೆಗೆ ಸಕಲ ಸಿದ್ಧತೆ
ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ನಾಳೆ ಚಿಕ್ಕ ಜಾತ್ರೆಗೆ ಮೂರು ರಥಗಳನ್ನು ಎಳೆಯುತ್ತಾರೆ.
ಶ್ರೀ ಗಣಪತಿ ಶ್ರೀ ಚಂಡಿಕೇಶ್ವರ ಶ್ರೀ ಶ್ರೀಕಂಠೇಶ್ವರ ಪಾರ್ವತಮ್ಮ ಜಾತ್ರೆಯಲ್ಲಿ ನಡೆಯುವ ರಥಗಳು
ಬೆಳಿಗ್ಗೆ 9:00 ರಿಂದ 9:30 ಗಂಟೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಗುತ್ತದೆ.
ದೇವಾಲಯದ ಆಡಳಿತ ಅಧಿಕಾರಿ ಜಗದೀಶ್ ನೇತೃತ್ವದಲ್ಲಿ ಜಾತ್ರೆಗೆ ಸಕಲ ಸಿದ್ಧತೆ ನಡೆಯುತ್ತಿದೆ ಪೂಜೆಗಳು ಸಾಗುತ್ತಿವೆ ರಥಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಹೂಗಳಿಂದ ಹಸಿರು ತೋರಣಗಳಿಂದ ಸಿಂಗರಿಸಲಾಗಿದೆ
ನಾಳೆ ಹುಣ್ಣಿಮೆ ಇರುವುದರಿಂದ ಜಾತ್ರೆಯು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಆದ್ದರಿಂದ ದೇವಸ್ಥಾನದ ಆಡಳಿತ ವತಿಯಿಂದ ಚಿಕ್ಕ ಜಾತ್ರೆಗೆ ಸಂಬಂಧಪಟ್ಟಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಒಟ್ಟಾರೆ ನಾಳೆ ನಂಜನಗೂಡಿನಲ್ಲಿ ಭಕ್ತಿ ಪೂರ್ವಕವಾಗಿ ವಿಜೃಂಭಣೆಯಿಂದ ಚಿಕ್ಕ ಜಾತ್ರೆ ನಡೆಯುತ್ತದೆ.




























