
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜ.16 ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ತಿಂಥಣಿ ಸೇತುವೆ ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ ಲಿಂಗೈಕ್ಯರಾಗಿರುವುದರಿಂದ ಇಡೀ ಸಮುದಾಯಕ್ಕೆ ಭಾರಿ ನಷ್ಟವಾಗಿದೆ ಎಂದು ಅಹಿಂದ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ್ ಹೇಳಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಕನಕ ವೃತ್ತದ ಬಳಿ ಗುರುವಾರ ನಡೆದ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರು ಪೀಠದ ಸಿದ್ಧರಾಮನಂದ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪೂಜ್ಯರು ಸಾಹಿತ್ಯ- ಸಮಾಜ-
ಸಂಸ್ಕೃತಿ ಪ್ರಿಯರಾಗಿದ್ದರು. ಪುಸ್ತಕ ಪ್ರೀತಿ ಅಗಾಧವಾದುದು. ಕಳೆದ ಮೂವತ್ತು ವರ್ಷಗಳಿಂದ “ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಸಮಾಜದಲ್ಲಿ ಜಾಗೃತೆ ಮೂಡಿಸಿದ್ದರು. ಹಾಲುಮತ ಸಂಸ್ಕೃತಿ ಕುರಿತು ವಿಚಾರ ಸಂಕಿರಣ,ಪುಸ್ತಕ ಪ್ರಕಟನೆ, ಕಲೆಗಳ ಪ್ರದರ್ಶನ, ಸಂಪ್ರದಾಯ, ಪರಂಪರೆಯನ್ನು ದಾಖಲಿಸಬೇಕೆನ್ನುವ ಅವರ ಕಳಕಳಿ ಅನನ್ಯವಾದುದು.
ಅವರ ಮಾರ್ಗದರ್ಶನದಲ್ಲಿ ಯುವಕರು ಶಿಕ್ಷಣದಲ್ಲಿ ಆಸಕ್ತಿ ತೋರಿಸಿದರು. ಅವರ ಅಗಲಿಕೆಯಿಂದ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಅಧ್ಯಕ್ಷ ಎಂ. ಶಿವರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಮುಟುಗನಹಳ್ಳಿ ಕೊಟ್ರೇಶ್,ಟಿ. ಮಹೇಶ್, ರವಿಕುಮಾರ್ ತಂಬ್ರಹಳ್ಳಿ, ಕೋಲ್ ಶಾಂತಪ್ಪ, ಎಚ್. ಪ್ರಕಾಶ್, ಹೊಸಮನೆ ಮಂಜುನಾಥ್, ಮೇಟಿ ಮಂಜುನಾಥ್, ಉಮೇಶ್, ಕೃಷ್ಣಾಪುರ ದೊಡ್ಡಬಸಪ್ಪ, ರಾಮಣ್ಣ, ಎಸ್.ಕೆ. ಗೋಣಿಪ್ಪ, ಸೊನ್ನದ ಸಂತೋಷ್, ಬಾಣದ ಹನುಮಂತ, ದಾನಪ್ಪ, ಡಿಕೆ ಬಸವರಾಜ, ದುರ್ಗಪ್ಪ,ರಾಘವೇಂದ್ರ, ಯಮುನಪ್ಪ ಕಲ್ಲೋಡಿ ಕರಬಸಪ್ಪ, ಕೋಟಿಪ್ಪ, ರವೀಂದ್ರ ಮತ್ತು ಇತರರು.
























