
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಫೆ.10:- ಇಂದಿನ ಸಮಾಜದಲ್ಲಿ ಜೀವನ ನಡೆಸಲು ಕಷ್ಟ ಪಡುತ್ತಿರುವ ಅನಾಥರು ಹಾಗೂ ವೃದ್ಧರಿಗೆ ಹಣ ನೀಡುವ ಜೊತೆಗೆ ಜೀವನೋಪಾಯಕ್ಕೆ ಅಗತ್ಯ ವಸ್ತುಗಳನ್ನು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ಕೆ ಸರಿಸಮನಾದ ಮತ್ತೊಂದು ಧರ್ಮ ಕಾರ್ಯ ಇಲ್ಲಾ ಎಂದು ಕೊಳ್ಳೇಗಾಲ ಟೌನ್ ಮಾಜಿ ನಗರಸಭೆ ಸದಸ್ಯರಾದ ಶ್ರೀಮತಿ ಎನ್. ನಾಗಮಣಿ ಗೋಪಾಲ್ ರವರು ತಿಳಿಸಿದರು. ಶ್ರೀ ಕ್ಷೇತ್ರದವರು ಕೊಳ್ಳೇಗಾಲ ತಾಲೂಕಿನಲ್ಲಿ 43 ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಟ್ಟಣದ ಆನಂದ ಜ್ಯೋತಿ ಕಾಲೋನಿಯ ಸಣ್ಣಮ್ಮ ರವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ನೀಡಿದ ವಾತ್ಸಲ್ಯ ಕಿಟ್ ಅನ್ನು ಮಾಜಿ ನಗರಸಭೆ ಸದಸ್ಯರು ಎನ್.ನಾಗಮಣಿ ಗೋಪಾಲ್ ರವರು ವಿತರಣೆ ಮಾಡಿದರು.
ನಮ್ಮ ಜನರು ಕಷ್ಟದ ಪರಿಸ್ಥಿತಿಯಲ್ಲಿದ್ದು,ಜೀವನ ನಡೆಸುತ್ತಿರುವ ಅನಾಥರು, ಅಭಲೆಯರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶ್ವದಲ್ಲಿಯೇ ಮಾದರಿ ಯೋಜನೆಯಾಗಿದೆ ಎಂದರೆ ತಪ್ಪಾಗಲಾರದು ಶ್ರೀಕ್ಷೇತ್ರ ಹೆಸರಿನಲ್ಲಿ ಧರ್ಮದ ಕಾರ್ಯವನ್ನು ಮಾಡುತ್ತಿರುವುದಕ್ಕೆ ನಾನು ಕೂಡ ಕೋಟಿ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಚಾಮರಾಜನಗರ ಜಿಲ್ಲಾ ನಿರ್ದೇಶಕರು ದಿನೇಶ್ ಮಾತನಾಡಿ ಪೂಜ್ಯ ವೀರೇಂದ್ರಹೆಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗಬೇಕು ಅವರ ನೋವಿನೊಂದಿಗೆ ನಾವು ಇರಬೇಕು ಎನ್ನುವ ಸದುದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವೇ ಹತ್ತಾರು ಜನಪರ ಯೋಜನೆಯು ಜಾರಿಗೆ ತಂದಿದ್ದು ಒಟ್ಟು ತಾಲ್ಲೂಕಿನಲ್ಲಿ 105 ಫಲಾನುಭವಿಗಳಿದ್ದು 1000 ರೂ ಮಾಸಾಶನ ವಿತರಣೆಯನ್ನು ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾಭನುಭವಿಗಳ ಖಾತೆಗೆ ಜಮೆ ಮಾಡುತ್ತಿರುವುದರಿಂದ ಒಟ್ಟು 1.05.000 ರೂ ಖರ್ಚಾಗುತ್ತಿದೆ.
ಅವರು ತಮ್ಮ ಔಷಧಿ ಸೇರಿದಂತೆ ಅಗತ್ಯತೆಯನ್ನು ಪೂರೈಸಿಕೊಳ್ಳಲು ಸಹಕಾರಿಯಾಗುತ್ತಿದ್ದು ಇದರ ಜೊತೆಗೆ ವಿದ್ಯಾರ್ಥಿ ವೇತನ, ಶಾಲಾ ಕಾಲೇಜುಗಳಿಗೆ ಅಗತ್ಯ ಪರಿಕರಗಳು ಮತ್ತು ನಿರ್ಗತಿಕರಿಗೆ ಮನೆ ಕಟ್ಟಿಕೊಳ್ಳಲು ಸಹಾಯ ಮಾಡುವ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಪೂಜ್ಯರ ಸೇವೆ ಹರಡಿಕೊಂಡಿದೆ ಎಂದು ತಿಳಿಸಿದರು. ವಾತ್ಸಲ್ಯ ಕಿಟ್ ವಿತರಣೆ.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ದಿನರಾಜ್ ಶೆಟ್ಟಿ, ಜನಜಾಗೃತಿ ಸರಸ್ಯರಾದ ಅರುಣ್, ವಲಯ ಮೇಲ್ವಿಚಾರಕರಾದ ಪ್ರಕಾಶ್, ಜ್ಞಾನ ವಿಕಾಶ ಸಮನ್ವಯಾಧಿಕಾರಿ ರೇಖಾ, ಹಣಕಾಸು ಅಧಿಕಾರಿ ದತ್ತಾತ್ರೇಯ,ಆಡಳಿತ ಪ್ರಬಂಧಕರು ದಿವ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.




























