
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.10: ಪೂಜ್ಯ ವೀರೇಂದ್ರ ಹೆಗ್ಗಡೆಯವರು ನಿಸ್ವಾರ್ಥ ಸೇವೆಯ ಮಹತ್ವವನ್ನು ಒತ್ತಿ ಹೇಳಿದ್ದಾನೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದು ಪುಣ್ಯ ಕಾರ್ಯಗಳಲ್ಲಿ ಒಂದಾಗಿದೆ. ನಮ್ಮಲ್ಲಿರುವ ಒಂದು ಭಾಗವನ್ನು ದೇವರಿಗೆ ನೀಡುವ ಮೂಲಕ, ನಾವು ಭಗವಂತನಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವುದು ಒಂದು ಮಹತ್ತರವಾದ ಪುಣ್ಯದ ಕೆಲಸವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಶ್ರೀಯುತ ರೋಹಿತಾಕ್ಷ ಅವರು ತಿಳಿಸಿದರು
ಬಳ್ಳಾರಿ ತಾಲೂಕಿನ ಕಕ್ಕಬೇವಿನಹಳ್ಳಿ ಗ್ರಾಮದ ರುಕ್ಮಿಣಿ ಪಾಂಡುರಂಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಿಂದ ರೂ 1 ಲಕ್ಷ ಡಿ ಡಿ ವಿತರಿಸಿ ಮಾತನಾಡಿ, ನಮ್ಮ ಜೀವನದಲ್ಲಿ ಭಗವಂತನ ಉಪಸ್ಥಿತಿಯನ್ನು ಆಸ್ವಾಧಿಸಬಹುದು. ಈ ಅಭ್ಯಾಸವು ಹೃದಯ, ಮನಸ್ಸು ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ. ಇದು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ. ದಾನವೆಂದರೆ ಕೇವಲ ಭೌತಿಕ ತ್ಯಾಗವಲ್ಲ, ಇದು ಭಗವಂತನಿಗೆ ನಿಮ್ಮ ಭಕ್ತಿ ಮತ್ತು ಸಮರ್ಪಣೆಯ ಅಭಿವ್ಯಕ್ತಿಯಾಗಿದೆ.
ನಿರ್ಗತಿಕರಿಗೆ, ಬಡವರಿಗೆ ದಾನ ಮಾಡುವುದರಿಂದ ಹೇಗೆ ನಮ್ಮ ಪುಣ್ಯ ವೃದ್ಧಿಯಾಗುತ್ತದೆಯೋ ಹಾಗೇ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದರಿಂದಲೂ ಪುಣ್ಯದ ಫಲ ಹೆಚ್ಚಾಗುತ್ತದೆ ಎಂದರು.
ಬಳ್ಳಾರಿ ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿ ಬಸವರಾಜ ಕೆ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸುಮಾರು 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೆ 2012-2026 ಇಲ್ಲಿ ವರೆಗೆ ಒಟ್ಟು 222 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಪೂಜ್ಯ ಖಾವಂದರು ರೂ 3 ಕೋಟಿ 49 ಲಕ್ಷ ಸಹಾಯಧನವನ್ನು ಮಂಜೂರಾತಿ ನೀಡಿರುತ್ತಾರೆ.
ನಮ್ಮ ಬಳ್ಳಾರಿ ತಾಲೂಕಿನಲ್ಲಿ ಇದು ವರೆಗೂ 50 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ರೂ 68 ಲಕ್ಷದ 35 ಸಾವಿರ ರೂ ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಜೂರಾತಿ ಆಗಿದೆ ಎಂದು
ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನಕ್ಕೆ ಒಂದು ಲಕ್ಷದ ಡಿಡಿ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಧ್ಯಾತ್ಮಿಕ ಚಿಂತನೆ ಒಳಗೊಂಡ ಭಜನಾ ಕಮ್ಮಟ, ಸರ್ವಧರ್ಮ ಸಮ್ಮೇಳನ, ನಿರ್ಗತಿಕರಿಗೆ ಮಾಶಾಸನ, ವಾತ್ಸಲ್ಯ ಮನೆ ರಚನೆ,ನಿತ್ಯ ಜೀವನ ನಿರ್ವಹಣೆಯ ಅಗತ್ಯ ಇರುವ ಪರಿಕರಗಳ ಒಳಗೊಂಡ ವಾತ್ಸಲ್ಯ ಕಿಟ್ ಸೌಲಭ್ಯ, ಜಲಮಂಗಲ ಕಾರ್ಯಕ್ರಮದಡಿ ವಿಕಲ ಚೇತನರಿಗೆ ಯೋಜನೆಯಿಂದ ವಾಟರ್ ಬೆಡ್, ವಾಕಿಂಗ್ ಸ್ಟಿಕ್, ವಿಲ್ ಚೇರ್ ಇತರೆ ಸಲಕರಣೆ ವಿತರಣೆಯನ್ನು ಯೋಜನೆಯಿಂದ ಮಾಡಲಾಗುತ್ತಿದೆ,
ಪೂಜ್ಯ ವೀರೇಂದ್ರ ಹೆಗ್ಗಡೆಯವರ ವಿಶೇಷ ಕಾಳಜಿ ಎಂದರೆ ನೆಲ ಜಲ ಸಂರಕ್ಷಣೆಗಾಗಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಯಲ್ಲಿ ಕೆರೆ ಹೂಳೆತ್ತುವ ಮೂಲಕ ಜೀವಜಲ ಉಳಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಈ ವರೆಗೆ 900 ಕ್ಕು ಹೆಚ್ಚು ಕೆರೆ ಪುನಶ್ಚೇತನ ಪೂರ್ಣಗೊಳಿಲಾಗಿದೆ ಎಂದರು
ಕಕ್ಕಬೇವಿನಹಳ್ಳಿ ಗ್ರಾಮದ ಶ್ರೀ ರುಕ್ಮಿಣಿ ಪಾಂಡುರಂಗ ಟ್ರಸ್ಟ್ ದೇವಸ್ಥಾನದ ಅಧ್ಯಕ್ಷ ಗಾದಿಲಿಂಗಪ್ಪ ಮಾತನಾಡಿ, ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದ್ದು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಮ್ಮ ಕಮಿಟಿಯ ಎಲ್ಲಾ ಸದಸ್ಯರು ಸೇರಿಕೊಂಡು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ನಮ್ಮ ಗ್ರಾಮದಲ್ಲಿ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದ ಕಟ್ಟಡದ ನಿರ್ಮಾಣವಾಗುತ್ತಿದ್ದು ಕ್ಷೇತ್ರದಿಂದ ಸಹಾಯಧನವನ್ನು ನೀಡಬೇಕು ಎಂದು ಕೇಳಿಕೊಂಡಾಗ ಪೂಜ್ಯರು ಸಂತೋಷದ ರೂ 1 ಲಕ್ಷವನ್ನು ಮಂಜೂರಾತಿ ನೀಡಿದ್ದು ಕಮಿಟಿಯ ಎಲ್ಲಾ ಸದಸ್ಯರಿಗೂ ಖುಷಿಯಿಂದ ಕ್ಷೇತ್ರದಿಂದ ಮಂಜೂರಾತಿ ಪ್ರಸಾದವನ್ನು ಸ್ವೀಕರಿಸಿದೆವು ಎಂದರು
ಈ ಕಾರ್ಯಕ್ರಮದಲ್ಲಿ ಉಲ್ಲಿ ಲೋಕೇಶ್ ಉಪಾಧ್ಯಕ್ಷರು ಶ್ರೀ ರುಕ್ಮಿಣಿ ಪಾಂಡುರಂಗ ಟ್ರಸ್ಟ್, ಮಹೇಶ್ ಎಸ್ ಬಳ್ಳಾರಿ ತಾಲ್ಲೂಕಿನ ಕೃಷಿ ಮೇಲ್ವಿಚಾರಕರು, ಮಲ್ಲಿಕಾರ್ಜುನ ಪ್ರಧಾನ ಕಾರ್ಯದರ್ಶಿ ಶ್ರೀ ರುಕ್ಮಿಣಿ ಪಾಂಡುರಂಗ ಟ್ರಸ್ಟ್. ಲಕ್ಷ್ಮೀ ರೆಡ್ಡಿ ಸಹ ಕಾರ್ಯದರ್ಶಿಗಳು ಹಾಗೂ ಶ್ರೀ ರುಕ್ಮಿಣಿ ಪಾಂಡುರಂಗ ಟ್ರಸ್ಟ್ ಸದಸ್ಯರಾದ ಕಟ್ಟೆಪ್ಪ, ಜಿ.ಗಾದಿಲಿಂಗಪ್ಪ, ಕೆ.ಮಲ್ಲಪ್ಪ ಗಾದಿಲಿಂಗಪ್ಪ ಹೆಚ್. ಗೋಡೆ ಗಾದಿಲಿಂಗಪ್ಪ. ದುರ್ಗಣ್ಣ. ಕೆ.ಲಕ್ಷ್ಮಣ. ಯೆರ್ರಪ್ಪ ಕೆ. ಮಂಜುನಾಥ. ಕೆ. ಗಾದಿಲಿಂಗಪ್ಪ. ಚಿದಾನಂದ ಎರ್ರಿಸ್ವಾಮಿ. ಬಸವರಾಜ. ದೇವೇಂದ್ರಪ್ಪ. ಲಕ್ಷ್ಮಣ ಕೆ ರಮೇಶ್. ಕೆ ವಿ ತಿಪ್ಪೇಸ್ವಾಮಿ ಹಾಗೂ ಶ್ರೀಮತಿ ಶಕುಂತಲಾ ಕಕ್ಕಬೇವಿನಹಳ್ಳಿ ಗ್ರಾಮದ ಸೇವಾ ಪ್ರತಿನಿಧಿಗಳು ಶ್ರೀಮತಿ ಪಲ್ಲವಿ ಗ್ರಾಮದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು
