ಧರ್ಮದ ಬಗ್ಗೆ ನಮ್ಮಲ್ಲಿ ಪರಿವರ್ತನೆ ಆಗದಿದ್ದರೇ ಧರ್ಮಕ್ಕೆ ಉಳಿಗಾಲವಿಲ್ಲ – ಒಡಿಯೂರು ಶ್ರೀ

ಬಾಳುಗೋಡಿನಲ್ಲಿ ಬೃಹತ್ ಹಿಂದೂ ಸಂಗಮ
ಸುಳ್ಯ:’ಹಿಂದೂ ಧರ್ಮದ ಆಚಾರ ವಿಚಾರಗಳು, ಸಂಸ್ಕೃತಿಗಳನ್ನು ಅರಿತು ನಮ್ಮ ಕಟ್ಟುಪಾಡುಗಳಲ್ಲಿ ಪರಿವರ್ತನೆ ಆಗಬೇಕು. ನಮ್ಮ ಹಿಂದೂ ಧರ್ಮಕ್ಕೆ ಆಳಿವಿಲ್ಲ ಆದರೆ ನಮ್ಮಲ್ಲಿರುವ ಅಸ್ಪಶ್ಯತೆ ನಾಶ ಆಗುವ ಮೂಲಕ ಪರಿವರ್ತನೆ ಆಗಲೇಬೇಕು ಎಂದು
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಗುರುದೇವಾನಂದ ಸ್ವಾಮಿಜೀ ಹೇಳಿದರು.
ಅವರು ಹಿಂದೂ ಸಂಗಮ ಆಯೋಜನಾ ಸಮಿತಿ ಸುಳ್ಯ ಇದರ ವತಿಯಿಂದ ಬಾಳುಗೋಡಿನ ಬೆಟ್ಟುಮಕ್ಕಿ ಮುಚ್ಚಾರದ ದಿ. ತಮಯ್ಯ ಗೌಡ ಕೂಜುಗೋಡು ಕಟ್ಟೆಮನೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ಉದ್ದೇಶಿಸಿ ಆಶೀರ್ವಚನ ನೀಡಿದರು.
ನಾವೆಲ್ಲಾ ಧರ್ಮ ಸಂರಕ್ಷಣೆಯ ಸೇನಾನಿಗಳಾಗಬೇಕು. ಸಂಘರ್ಷಕ್ಕೆ ಒಂದೇ ಉತ್ತರ ಸಂಘಟನೆ, ದೇಶದ ಉಳಿವು ಯುವಕರು ಮತ್ತು ಮಾತೆಯರು ಕೈಯಲ್ಲಿದೆ ಎಂದ ಅವರು. ಎಲ್ಲಾ ಯುಗದಲ್ಲಿ ರಾಕ್ಷಸ ಗುಣದವರು, ದೇವ ಗುಣದವರು ಬೇರೆ ಬೇರೆ ಆಗಿದ್ದರು, ಆದರೆ ನಾವೀಗ ಕಲಿಯುಗದಲ್ಲಿ ರಾಕ್ಷಸ ಗುಣ ದೇವ ಗುಣ ಮನುಷ್ಯ ಒಬ್ಬನಲ್ಲೇ ಮಿಲಿತವಾಗಿದೆ ಎಂದು ಹೇಳಿದ್ರು.
ದಿಕ್ಸೂಚಿ ಭಾಷಣ ಮಾಡಿದ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಮುಖ್, ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ ಹಿಂದುತ್ವ ಅಂದರೆ ಭಾರತೀಯರ ವಿಶ್ವ ದೃಷ್ಟಿ. ಜೀವನ ದರ್ಶನ, ಭಾರತೀಯರ ನಡವಳಿಕೆ ಆಗಿದೆ. ಹಿಂದುತ್ವದಿಂದ ಭಾರತವನ್ನು ಬಿಡಿಸಿ ನೋಡಲು ಸಾಧ್ಯವಿಲ್ಲ. ಧರ್ಮ ಅಂದರೆ ಅನುಶಾಸನ, ಕರ್ತವ್ಯ, ಪಿತೃಧರ್ಮ, ಮಾತೃ ಧರ್ಮ, ಆಚಾರ್ಯ ಧರ್ಮ, ರಾಜ ಧರ್ಮ ಎಲ್ಲವೂ ಹಿಂದೂ ಸಮಾಜ ಸಮ್ಮಿಳಿತವಾಗಿದೆ ಎಂದ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬಿ.ಎಸ್.ಎನ್.ಎಲ್, ಮೈಸೂರು ವಿಭಾಗೀಯದ ನಿವೃತ್ತ ಅಭಿಯಂತರಾದ ದೇವದಾಸ ಕಜೆಗದ್ದೆ ಬಾಳುಗೋಡು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿಂದೂ ಸಂಗಮದ ತಾಲೂಕು ಅಧ್ಯಕ್ಷ ಎಂ.ಬಿ.ಸದಾಶಿವ, ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಕುಂಞಟಿ, ನಿವೃತ್ತ ಉಪನ್ಯಾಸಕ ರಾಮಚಂದ್ರ ಗೌಡ ಪಳಂಗಾಯ ಪಲ್ಲತ್ತಡ್ಕ, ಭೂ ಸೇನಾ ಯೋಧ ಯಶವಂತ ನಿಡುಬೆ, ದಮಯಂತಿ ಸುಧೀರ್ ಕಟ್ಟೆಮನೆ, ರಾಮಚಂದ್ರಪುರ ಮಠದ ಮಾತೃ ಸಮಿತಿ ಮುಳ್ಳೇರಿಯ ಮಂಡಲ ಅಧ್ಯಕ್ಷ ದೇವಕಿ ಭಟ್ ಪನ್ನೆ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಪ್ರಭಾಕರ ಕಿರಿಭಾಗ, ಪ್ರಗತಿಪರ ಕೃಷಿಕ ಸೀತಾರಾಮ ಗೌಡ ಬಿಳಿಮಲೆ, ನಾಟಿ ವೈದ್ಯ ಗಣಪತಿ ಭಟ್ ಬಿ ಎಸ್, ಪ್ರಶಸ್ತಿ ದೈವ ನರ್ತಕ ಬೊಳಿಯ ಬೆಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಲೋಕೇಶ್ ಮುಂಡೋಕಜೆ ಉಪಸ್ಥಿತರಿದ್ದರು.
ಅಜೇಯ್ ಪೊಯ್ಯೆಮಜಲು ಶಂಖನಾದ ಮಾಡಿದರು, ವಿನಯ್ ವೈಯ್ಯಕ್ತಿಕ ಗೀತೆ ಹಾಡಿದರು, ಚಂದ್ರಹಾಸ ಶಿವಾಲ ಸ್ವಾಗತಿಸಿ, ಸೋಮಶೇಖರ್ ಕಟ್ಟೆಮನೆ ಪ್ರಸ್ತಾವಿಕ ಮಾತನಾಡಿದರು. ಸತೀಶ್ ಟಿ.ಎನ್ ವಂದಿಸಿ, ಲೊಹಿತ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.