ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ-ಜಪಾನ್ ಅಂಕಿತ

ಟೋಕಿಯೋ,ಅ.28:– ವ್ಯಾಪಾರ, ವಹಿವಾಟು ಸೇರಿದಂತೆ ನಿರ್ಣಾಯಕ ಖನಿಜಗಳ ಮೇಲೆ ಸಹಕರಿಸುವÀ ಒಪ್ಪಂದಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಸಹಿ ಹಾಕಿದ್ದಾರೆ.


ಮೊಬೈಲ್ ಫೆÇೀನ್‍ಗಳಿಂದ ಹಿಡಿದು ಜೆಟ್ ಎಂಜಿನ್‍ಗಳವರೆಗೆ ಎಲ್ಲದರಲ್ಲೂ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂದಾಗಿರುವ ಅಮೇರಿಕಾ, ಜಪಾನ್‍ನೊಂದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದೆ. ದಕ್ಷಿಣ ಕೊರಿಯಾದಲ್ಲಿ ಚೀನಾದ ನಾಯಕ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿಯಾಗಲು ಎರಡು ದಿನಗಳ ಮೊದಲು ಡೊನಾಲ್ಡ್ ಟ್ರಂಪ್ ಅವರು ಜಪಾನ್ ಪ್ರಧಾನಿ ಅವರೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.


ಪರಸ್ಪರ ವ್ಯಾಪಾರ ಯುದ್ಧದ ಸುಂಕಾಸ್ತ್ರದಲ್ಲಿ ಗೊಂದಲಕ್ಕೆ ಒಳಗಾಗಿದ್ದ ಹಲವು ತಿಂಗಳ ನಂತರ ಅಮೇರಿಕಾ ಮತ್ತು ಜಪಾನ್ ವಿವಿಧ ಒಪ್ಪಂದಗಳಿಗೆ ಸಹಿಹಾಕಿರುವುದು ಎರಡೂ ದೇಶಗಳಲ್ಲಿ ಉತ್ತಮ ಸ್ನೇಹ ಬಾಂಧವ್ಯಕ್ಕೆ ವೇದಿಕೆಯಾಗಿದೆ ಎನ್ನಲಾಗಿದೆ.


ಈ ಮೂಲಕ ಚೀನಾ ಅಪರೂಪದ ಭೂಮಿಯ ಖನಿಜಗಳ ಮೇಲಿನ ತನ್ನ ಪ್ರಾಬಲ್ಯವನ್ನು ಅಮೇರಿಕಾ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದೆ, ಆದರೆ ಚೀನಾ ಯಾವುದೇ ಕಾರಣಕ್ಕೂ ಅಪರೂಪದ ಖನಿಗಳನ್ನು ಅಮೇರಿಕಾಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿಮುರಿದಂತೆ ಪುನರುಚ್ಚರಿಸಿದೆ


ಜಪಾನ್‍ನ ಅಕಾಸಾಕಾ ಅರಮನೆಯಲ್ಲಿ ನಡೆದ ಸಹಿ ಸಮಾರಂಭದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೂತನವಾಗಿ ಪ್ರಧಾನಿಯಾಗಿ ನೇಮಕಗೊಂಡ ಸನೈ ತಕೈಚಿ ಅವನ್ನು ಭೇಟಿ ಮಾಡಿ ಅಭಿನಂಧಿಸಿದ್ದಾರೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ವತಕ್ಷಣವೇ ಉನ್ನತ ಮಟ್ಟದ ರಾಜತಾಂತ್ರಿಕ ಸಂಬಂಧ ಏರ್ಪಡಿಸಲಾಗಿದೆ, ಇದು ಜಪಾನ್ ಮತ್ತು ಅಮೇರಿಕಾ ನಡುವೆ ಉತ್ತಮ ಬಾಂಧವ್ಯಕ್ಕೆ ವೇದಿಕೆಯಾಗಿದೆ ಎನ್ನಲಾಗಿದೆ.


ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ ಗುರುವಾರ ಭೇಟಿ ಮಾಡಲಿದ್ದು ಅದಕ್ಕೂ ಮುನ್ನ ಜಪಾನ್‍ನೊಂದಿಗಿನ ಒಪ್ಪಂದ ಮಹತ್ವ ಪಡೆದುಕೊಂಡಿದೆ.
ಜಪಾನ್ ಒಪ್ಪಂದ ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ಸೇರಿದಂತೆ ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳೊಂದಿಗೆ ಮುಂಬರುವ ದಿನಗಳಲ್ಲಿ ಉತ್ತಮ ಸ್ನೇಹ ಬಾಂಧವ್ಯ ಬೆಸೆಯಲು ಕಾರಣವಾಗಲಿದೆ ಎಂದು ಹೇಳಲಾಗಿದೆ.


ಚೀನಾದ ಹತ್ತಿರದ ದೇಶಗಳೊಂದಿಗೆ ಅಮೆರಿಕದ ಮೈತ್ರಿಗಳನ್ನು ಬಲಪಡಿಸುವ ಉದ್ದೇಶದಿಂದ ಏಷ್ಯಾದ ಹಲವು ದೇಶಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಕೆಲಸವನ್ನು ಡೊನಾಲ್ಡ್ ಟ್ರಂಪ್ ಮಾಡಿದ್ದಾರೆ.