Home ಜಿಲ್ಲೆ ಮೈಸೂರು ದೋಷಪೂರಿತ ಜೆಸಿಬಿ ನೀಡಿ ವಂಚನೆ

ದೋಷಪೂರಿತ ಜೆಸಿಬಿ ನೀಡಿ ವಂಚನೆ

ಸಂಜೆವಾಣಿ ನ್ಯೂಸ್
ಮೈಸೂರು, ಆ.30:-
ಖಾಸಗಿ ಜೆಸಿಬಿ ಶೋರೂಮ್ ಕಂಪನಿಯೊಂದು ದೋಷಪೂರಿತ ವಾಹನ ನೀಡಿ ರೈತನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದನ್ನು ಖಂಡಿಸಿ, ವಂಚನೆಗೊಳಗಾದ ರೈತನಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.


ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ರೈತ ಸೋಮೇಶ್‍ಬಾಬು ಎಂಬುವರು ಮೈಸೂರಿನ ದೇವೇಗೌಡ ಸರ್ಕಲ್ ರಿಂಗ್ ರೋಡ್ ಬಳಿ ಇರುವ ಪಿ.ಎಸ್.ಎನ್ ಕನ್ಸ್‍ಟ್ರಕ್ಷನ್ ಮತ್ತು ಇಕ್ವಿಪ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ 26.50 ಲಕ್ಷ ಮೌಲ್ಯದ ಟಾಟಾ ಜೆಸಿಬಿಗಾಗಿ 4.90 ಲಕ್ಷ ಮುಂಗಡ ಹಣ ಪಾವತಿಸಿದ್ದರು. ಆದರೆ ಕಂಪನಿ ಸಂಪೂರ್ಣ ತಾಂತ್ರಿಕ ದೋಷವಿರುವ ಹಾಗೂ ಚಾಲನೆಗೆ ಬಾರದ ನಕಲಿ ಜೆಸಿಬಿ ನೀಡಿ ವಂಚಿಸಿದೆ ಎಂದು ಆರೋಪಿಸಿದರು.
ಈ ಹಿಂದೆ ಮೈಸೂರು ನಗರ ಪೆÇಲೀಸ್ ಕಮಿಷನರ್ ಕಚೇರಿ ಹಾಗೂ ವಿವಿ ಪುರಂ ಪೆÇಲೀಸ್ ಠಾಣೆಯಲ್ಲಿ ಸಂಧಾನ ಸಭೆಗಳು ನಡೆದಿದ್ದವು. ಸಭೆಯಲ್ಲಿ ಕಂಪನಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡು, ವಾಹನದ 51 ದೋಷಪೂರಿತ ಬಿಡಿಭಾಗಗಳನ್ನು ಉಚಿತವಾಗಿ ಬದಲಾಯಿಸಿಕೊಡುವುದಾಗಿ ಅಥವಾ ಹೊಸ ಜೆಸಿಬಿ ನೀಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಕಂಪನಿ ರೈತನಿಂದ ಎಲ್ಲಾ ವೀಡಿಯೋ ಮತ್ತು ಫೆÇೀಟೋ ಆಧಾರಗಳನ್ನು ಪಡೆದುಕೊಂಡು ಒಂದೂವರೆ ವರ್ಷ ಕಳೆದರೂ ಹೊಸ ವಾಹನ ನೀಡಿಲ್ಲ. ದೋಷವನ್ನೂ ಸರಿಪಡಿಸಿಲ್ಲ.


ಖರೀದಿಸಿದ ದಿನದಿಂದ ವಾಹನ ಯಾವುದೇ ಕೆಲಸಕ್ಕೆ ಬಾರದೆ ನಿಂತಲ್ಲೇ ನಿಂತಿದೆ. ಇದರಿಂದಾಗಿ ವರ್ಷಕ್ಕೆ 3.5 ರಿಂದ 4 ಲಕ್ಷ ಆದಾಯ ಕಳೆದುಕೊಂಡಿರುವ ರೈತ, ಬ್ಯಾಂಕ್ ಕಂತುಗಳನ್ನು ಕಟ್ಟಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಕುಟುಂಬ ಈಗ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿ ಕಾರಿದರು.


ಬೇಡಿಕೆಗಳು: ದೋಷಪೂರಿತ ಜೆಸಿಬಿ ಹಿಂಪಡೆದು ತಕ್ಷಣವೇ ರೈತನಿಗೆ ಹೊಸ ಹಾಗೂ ಉತ್ತಮ ಸ್ಥಿತಿಯಲ್ಲಿರುವ ಜೆಸಿಬಿ ನೀಡಬೇಕು. ಕಳೆದ ಎರಡು ವರ್ಷಗಳಿಂದ ವಾಹನ ಸ್ಥಗಿತಗೊಂಡು ರೈತನಿಗೆ ಉಂಟಾಗಿರುವ ಸಂಪೂರ್ಣ ಆದಾಯ ನಷ್ಟವನ್ನು ಕಂಪನಿಯೇ ಭರಿಸಬೇಕು. ರೈತರಿಗೆ ಮೋಸ ಮಾಡುತ್ತಿರುವ ಇಂತಹ ಶೋರೂಮ್ ಹಾಗೂ ಕಂಪನಿಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
?ಪ್ರತಿಭಟನೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಹೊಸೂರು ಕುಮಾರ್, ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.