ದೊಡ್ಡಸ್ವಾಮೇಗೌಡ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಪತ್ರಕರ್ತರ ಭವನಕ್ಕೆ ಯುಪಿಎಸ್ ಉಡುಗೊರೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಅ.17:-
ಹಳೇ ಮೈಸೂರು ಭಾಗದಲ್ಲಿ ತಾಲ್ಲೂಕು ಮಟ್ಟದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಾಣ ಮಾಡಿರುವುದು ಕೆ.ಆರ್.ನಗರ ಪಟ್ಟಣದಲ್ಲಿ ಮಾತ್ರ ಎಂದು ಪಟ್ಟಣದ 9 ನೇ ವಾರ್ಡ್ ನ ಕಾಂಗ್ರೆಸ್ ಯುವ ಮುಖಂಡ ಉದ್ಯಮಿ ಮಹೇಶ್ ಕುಮಾರ್ ( ಪುನೀತ್) ಹೇಳಿದರು.


ಪಟ್ಟಣದಲ್ಲಿರುವ ಪತ್ರಕರ್ತರ ಭವನದಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ ಅವರ 75 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಪತ್ರಕರ್ತರ ಭವನಕ್ಕೆ ಯುಪಿಎಸ್ ಉಡುಗೊರೆಯಾಗಿ ನೀಡಿ ಮಾತನಾಡಿದ ಅವರು ಪತ್ರಿಕೋದ್ಯಮ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅನೇಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸುದ್ದಿ ಮನೆಗಳಲ್ಲಿ ದುಡಿಯುವ ಪತ್ರಕರ್ತರು ಆರೋಗ್ಯ,ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿರುವುದನ್ನು ಕಂಡಿದ್ದು, ಇದಕ್ಕಾಗಿ ಕ್ಷೇಮಾಭಿವೃದ್ಧಿ ಯೋಜನೆಯನ್ನು ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಕರ್ತರು ನೇರವಂತಿಕೆ, ನಿಷ್ಠುರತೆ, ವಸ್ತುನಿಷ್ಠ ಹಾಗೂ ಸತ್ಯ ನಿಷ್ಠ ವರದಿಗಳನ್ನು ನೀಡುತ್ತಾ ಸದಾ ಕಾಲ ಎತ್ತಿಹಿಡಿಯಬೇಕೆಂದು ಆಶಯ ವ್ಯಕ್ತಪಡಿಸಿದ ಅವರು. ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಬದ್ಧತೆಯನ್ನು ಅಳವಡಿಸಕೊಳ್ಳಬೇಕಾಗಿದೆ ಎಂದರು.


ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ವಿದ್ಯುನ್ಮಾನ ಕ್ಷೇತ್ರವಂತೂ ವಿಸ್ತಾರಗೊಳ್ಳತ್ತಲೆ ಇದೆ. ಮಾಧ್ಯಮಗಳು ಮಾನವೀಯ ಕಳಕಳಿಯುಳ್ಳ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳ ಹಾಗೂ ವಿಚಾರಗಳಿಗೆ ಹೆಚ್ಚಿನ ಗಮನಹರಿಸಲಿ ಎಂದರು.


ಪುರಸಭೆ ಕಾನೂನು ಸಲಹೆಗಾರ ವಕೀಲ ಮಹದೇವಸ್ಚಾಮಿ, ಸಿಂಹಾದ್ರ ಯುವ ನೇನೆಯ ಗೌರವಾಧ್ಯಕ್ಣ ಗಿರೀಶ್, ಅಧ್ಯಕ್ಷ ಶಿವಕುಮಾರ್, ಸಹ ಕಾರ್ಯದರ್ಶಿ ಮೋಹನ್ ಕುಮಾರ್, ಸ್ವಾಮಿ ಮಡಿವಾಳ್, ವಿಶ್ವಕರ್ಮ ಸಮಾಜದ ಮುಖಂಡ ಜನಾರ್ದನ್(ಜಾನಿ), ಕಾಂಗ್ರೆಸ್ ಯುವ ಮುಖಂಡ ದೃವಕುಮಾರ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಭೇರ್ಯ ಮಹೇಶ್, ಖಜಾಂಚಿ ನಾಗೇಶ್, ನಿರ್ಧೆಶಕ ಕೆ.ಆರ್.ಶ್ರೀನಿವಾಸ್, ಮಹಮ್ಮದ್ ಸಬೀರ್, ಎಸ್.ಯೋಗಾನಂದ್ ಮೊದಲಾದವರು ಇದ್ದರು.