ದೇಶದ ಅಭಿವೃದ್ಧಿಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ತೇಜಸ್ವಿನಿ

ಸಂಜೆವಾಣಿ ನ್ಯೂಸ್
ಮೈಸೂರು: ನ.20:-
ಪಂಚ ಗ್ಯಾರಂಟಿಗೂ ಮೊದಲೇ ದೇಶದಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಕಟ್ಟಕಡೆÀಯ ವ್ಯಕ್ತಿಯ ಅಭಿವೃದ್ಧಿಗಾಗಿ ಶ್ರಮಿಸಿದವರು ಇಂದಿರಾ ಗಾಂಧಿ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದರು.


ನಗರದ ಕಾಂಗ್ರೆಸ್ ಭÀವನದಲ್ಲಿ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ಭಾರತದ ಉಕ್ಕಿನ ಮಹಿಳೆಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಜರಿಗೆ ಕೊಡುತ್ತಿದ್ದ ಹಣ ನಿಲ್ಲಿಸಿದರು. ಇದರಿಂದ ಸಹಜವಾಗಿ ದೇಶದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಅಲೆಯೊಂದು ಎದ್ದು ನಿಂತಿತು. ಗ್ಯಾರಂಟಿ ಯೋಜನೆಗಳಿಂದ 2000 ಹಣ ತೆಗೆದುಕೊಂಡು ಅದನ್ನೇ ವಿರೋಧÀ ಮಾಡುವವರು ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಜನಪರ ಯೋಜನೆಗಳು ಒಂದು ಪಕ್ಷದ ಕಮಿಟ್‍ಮೆಂಟ್ ಎಂದು ತಿಳಿಸಿದರು.
ಜಗತ್ತಿನಲ್ಲೇ ವಿಶೇಷ ಚಾಪನ್ನು ಮೂಡಿಸಿ ನಾಯಕಿ ಎನಿಸಿಕೊಂಡಿದ್ದ, ಅಮೇರಿಕಾವನ್ನು ಧಿಕ್ಕರಿಸಿ ರಷ್ಯಾದ ಸ್ನೇಹ ಬೆಳೆಸಿ ಭಾರತಕ್ಕೆ ವಿಶ್ವಮನ್ನಣೆ ತಂದುಕೊಟ್ಟು, ಎಲ್ಲಾ ನೋವು, ಅಪಮಾನಗಳನ್ನು ಲಾವಾರಸದಂತೆ ಸಹಿಸಿಕೊಂಡು ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದವರು ಇಂದಿರಾ ಗಾಂಧಿ ಹೇಳಿದರು.


ಬಾಂಗ್ಲಾದೇಶವನ್ನು ಮುಕ್ತಿಗೊಳಿಸುವ ಮೂಲಕ ಇದೇ ಇಂದಿರಾ ಗಾಂಧಿ ಅವರು ಭಾರತಕ್ಕೆ ಶಕ್ತಿ ತಂದುಕೊಟ್ಟರು. ಆದರೆ ಇಂದಿನ ಮೋದಿ ಕಾಲದಲ್ಲಿ ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ಗುಲಾಬಿ ಬರಲು ಸಾಧ್ಯವಾಯಿತು. ಚೈನಾದಿಂದ ಓಡಿಸಿದ ದಲೈಲಾಮ ಅವರಿಗೆ ಭಾರತ ಆಶ್ರಯ ಕೊಟ್ಟಿದೆ. ಇಂದು ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿದೆ. ಶೇಖ್ ಹಸೀನಾ ಭಾರತದ ಮಗಳು. ಅವರನ್ನು ಬಿಟ್ಟುಕೊಡುವುದಿಲ್ಲ. ನಂಬಿದವರನ್ನು ಭಾರತ ಎಂದೂ ಕೈ ಬಿಟ್ಟಿಲ್ಲ ಎಂದು ತಿಳಿಸಿದರು.


ಕಾಂಗ್ರೆಸ್ ಪಕ್ಷಕ್ಕೆ ಅಗ್ನಿ ಪರೀಕ್ಷೆ ಎದುರಾದಗಲೆಲ್ಲಾ ಕರ್ನಾಟಕ ಪಕ್ಷವನ್ನು ಬಿಟ್ಟುಕೊಟ್ಟಿಲ್ಲ. ನಮಗೆ ಸೋಲು, ಗೆಲುವು ಮುಖ್ಯವಲ್ಲ. ದೇಶವನ್ನು 200 ವರ್ಷ ಆಳಿದ ಬ್ರಿಟಿಷರನ್ನು ಓಡಿಸಿದವರಿಗೆ 10 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿಯನ್ನು ಓಡಿಸುವುದು ಕಷ್ಟವಲ್ಲ. ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಜಿನ್ನಾ ಅವರನ್ನು ಪೂಜೆ ಮಾಡುತ್ತಾರೆ. ಆದರೆ ಭಾರತದ ಪ್ರಥಮ ಪ್ರಧಾನ ಮಂತ್ರಿಯನ್ನು ಅವಹೇಳನ ಮಾಡುವ ಮೂಲಕ ಇತಿಹಾಸ ಅಳಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಚಿತ್ರನಟಿ ಕಂಗನಾ ರಣಾವತ್ ಅವರಿಗೆ ಎರಡು ಚಾಪ್ಟರ್ ಓದಲು ಬರುವುದಿಲ್ಲ. ಅಂತಹವರು ತುರ್ತು ಪರಿಸ್ಥಿತಿಯನ್ನು ಮೂವಿ ಮಾಡುತ್ತಾರೆ. ಅವರಿಗೇನು ಗೊತ್ತು ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಇಂದಿರಾ ಗಾಂಧಿ ಅವರು ಜೀವನದುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ದೇಶದಲ್ಲಿ ಇದ್ದಂತಹ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳನ್ನು ಇಂದಿರಾ ಗಾಂಧಿ ಎದುರಿಸಿ ನಿಂತವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ಟಿ.ವಿ.ಚಿಕ್ಕಣ್ಣ, ಬೈರಪ್ಪ, ಪುಷ್ಪಲತಾ, ಮುಖಂಡರಾದ ಶಿವಣ್ಣ, ರವಿ, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.