ದೇವಾಂಗಪೇಟೆ ಬಡಾವಣೆ ಜಲಾವೃತ್ತ ರೇಖಾ ರಮೇಶ್ ಭೇಟಿ: ಪರಿಶೀಲಿ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ:
ಪಟ್ಟಣದ 13ನೇ ವಾರ್ಡ್ ದೇವಾಂಗಪೇಟೆ ಬಡಾವಣೆಯ ಕೋಡಿ ಬೀದಿ ಮೂರು ದಿನಗಳಿಂದ ಬಿದ್ದ ಬಾರೀ ಮಳೆಗೆ ಜಲಾವೃತ್ತಗೊಂಡ ಹಿನ್ನೆಲೆ ನಗರಸಭೆ ಅಧ್ಯಕ್ಷರು ರೇಖಾ ರಮೇಶ್ ಭೇಟಿ ನೀಡಿ ಪರಿಶೀಲಿಸಿದರು.


ಈವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷರು ರೇಖಾ ಅವರು, ಈ ಬಗ್ಗೆ ಶಾಸಕರ ಗಮನಕ್ಕೆ ಬಂದಿದ್ದು ಕೋಡಿ ಬೀದಿಯಲ್ಲಿ ನೀರು ಹರಿಯದಂತೆ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿ, ಈಗ ಸದ್ಯಕ್ಕೆ ತಾತ್ಕಾಲಿಕ ಪರಿಹಾರವಾಗಿ ನಗರಸಭೆ ಕಡೆಯಿಂದ ಮಣ್ಣನ್ನು ಹಾಕಿ ನೀರು ತೆಗೆಯಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷರು ಎ.ಪಿ.ಶಂಕರ್, ಪೌರಯುಕ್ತರು ನಟರಾಜು, ಸದಸ್ಯರು ಪವಿತ್ರ ರಮೇಶ್, ಆರೋಗ್ಯ ನಿರೀಕ್ಷಕ ಚೇತನ್, ಸಿಬ್ಬಂದಿಗಳು, ಮಾಜಿ ಅಧ್ಯಕ್ಷರು ರಮೇಶ್, ಮಾಜಿ ನಾಮನಿರ್ದೇಶಿತ ಸದಸ್ಯ ಮಧುಚಂದ್ರ, ಮುಖಂಡರು ರಮೇಶ್, ವಿಜಯ್ ಕುಮಾರ್ ಹಾಗೂ ಇತರರು ಇದ್ದರು.