Home ಜಿಲ್ಲೆ ಮೈಸೂರು ದೇವನೂರು ಭೇಟಿಯಾದ ಮಧು ಬಂಗಾರಪ್ಪ

ದೇವನೂರು ಭೇಟಿಯಾದ ಮಧು ಬಂಗಾರಪ್ಪ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.24:-
ಸಚಿವ ಮಧು ಬಂಗಾರಪ್ಪ ಅವರು ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು ಮೈಸೂರಿನಲ್ಲಿಂದು ಭೇಟಿಯಾಗಿ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಶಿಕ್ಷಣದ ಕುರಿತು ಕೆಲವು ಸಲಹೆಗಳನ್ನು ಪಡೆದರು.


ಬಳಿಕ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಒಬ್ಬ ಶಿಕ್ಷಣ ಸಚಿವನಾಗಿ ಹಿರಿಯ ಸಾಹಿತಿಗಳ ಸಲಹೆ ಬೇಕಿತ್ತು. ಅದಕ್ಕಾಗಿ ಅವರನ್ನು ಇಂದು ಭೇಟಿ ಮಾಡಿ ಚರ್ಚೆ ಮಾಡಿದೆ. ನನ್ನ ಮೇಲೆ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದಿದ್ದವು. ಈ ಸಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಬಂತು. ಇದಕ್ಕೆ ಕಾರಣ ನಾವು ಬದಲಾವಣೆ ತಂದಿದ್ದು. ಶಿಕ್ಷಣ ವ್ಯವಸ್ಥೆ ಬಹಳಷ್ಟು ಹಾಳಾಗಿತ್ತು. ವೆಬ್ ಕಾಸ್ಟ್ ಮಾಡಿ ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ. ಅಲ್ಲದೇ, ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸುಧಾರಿಸಿದೆ. ಸಮಾನತೆ ಹಾಗೂ ಒಳ್ಳೆಯ ಶಿಕ್ಷಣ ಕೊಡೋದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ. ಕಲೆ, ನಾಟಕ, ಸಾಹಿತ್ಯದ ಬಗ್ಗೆಯೂ ಮಕ್ಕಳಿಗೆ ತಿಳಿಸುವ ಕುರಿತು ದೇವನೂರು ಮಹದೇವ ಅವರು ಸಲಹೆ ನೀಡಿದ್ದಾರೆ. ಕೆಪಿಎಸ್ ಶಿಕ್ಷಣ ನೀಡುವ ಕುರಿತು ಸಹ ಸಲಹೆ ನೀಡಿದರು ಎಂದು ತಿಳಿಸಿದರು.


ಇದನ್ನು ಕಡ್ಡಾಯ ಮಾಡೋಕೆ ಆಗಲ್ಲ. ಯಾವ ಶಾಲೆ ಸೇರಬೇಕು ಎಂಬುದು ಮಕ್ಕಳ ಹಾಗೂ ಪೆÇೀಷಕರ ಹಕ್ಕು. ಇದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ನೌಕರರು ಮಾತ್ರ ಅಲ್ಲ, ಎಲ್ಲರೂ ಕೂಡ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ ಅಂತ ನಾನು ಕೂಡ ಮನವಿ ಮಾಡುತ್ತೇನೆ. ಇದು ಎಲ್ಲರ ಬದ್ಧತೆ ಎಂದು ಮಾಧ್ಯಮದವರು ಕೇಳಿದ ಕೆಲವು ಪ್ರಶ್ನೆಗಳಿಗೆ ಸಚಿವ ಮಧು ಬಂಗಾರಪ್ಪ ಹೀಗೆ ಉತ್ತರಿಸಿದರು.


ಹಿಜಾಬ್ ಅಂತ ಬಿಜೆಪಿಯವರು ಕರೀತಾರೆ. ನಾವು ಸಮಾನತೆ ಅಂತೀವಿ. ಬಿಜೆಪಿಯವರು ಮೊದಲು ಕೇಂದ್ರೀಯ ವಿದ್ಯಾಲಯಗಳಲ್ಲಿ ಕೇಸರಿ ಶಾಲು ಹಾಕಿ ಬರಲಿ. ಬಳಿಕ ಅವರಿಗೆ ನಾನು ಉತ್ತರ ಕೊಡುವೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವರು ಕಿಡಿಕಾರಿದರು.
ನನ್ನ ಶೈಕ್ಷಣಿಕ ಹಿನ್ನೆಲೆ ನೋಡಿ ಗೇಲಿ ಮಾಡೋರು ಮೊದಲು ಮೋದಿ ಡಿಗ್ರಿ ಸರ್ಟಿಫಿಕೆಟ್ ಕೊಟ್ಟು ಮಾತನಾಡಲಿ. ಇದು ಕೆಟ್ಟ ಬುದ್ಧಿ ಇರೋರು ಪ್ರಶ್ನೆ ಮಾಡ್ತಾರೆ. ನಾನು ಪಿಯುಸಿ ಮುಗಿಸಿದ್ದೇನೆ. ಬ್ಯುಸಿನೆಸ್ ಮಾಡುವ ಸಲುವಾಗಿ ಮುಂದೆ ಓದಲಿಲ್ಲ ಅಷ್ಟೇ. ನಿಮಗಿಂತ (ಮಾಧ್ಯಮದವರು) ಕನ್ನಡ ಚೆನ್ನಾಗೆ ಮಾತಾಡ್ತೀನಿ. ಆದರೆ, ಬರೆಯೋದಕ್ಕೆ ಸ್ವಲ್ಪ ಕಷ್ಟ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.