
ಸುಳ್ಯ:ದೇವಚಳ್ಳ ಗ್ರಾಮದಲ್ಲಿ ಶಾಸಕರ ರೂ. ೯೨ ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.
ದೇವಚಳ್ಳ ಗ್ರಾಮದ ಮುಳಿಯಡ್ಕ- ವಾಲ್ತಾಜೆ ರಸ್ತೆ-೫.೫೦ ಲಕ್ಷ, ಹುರುಳಿಯಡ್ಕ- ಮಣಿಯೂರು-ಅಂಬೆಕಲ್ಲು ರಸ್ತೆ- ೧೦ ಲಕ್ಷ, ಮಣಿಯೂರು- ಪರ್ಲೆಡಿ ರಸ್ತೆ-೧೦ ಲಕ್ಷ, ಅಡ್ಕನಪಾರೆ ಕಾಲೋನಿ ರಸ್ತೆ-೧೦ ಲಕ್ಷ, ಎಲಿಮಲೆ- ಕಲ್ಲಪಣೆ ರಸ್ತೆ ೫.೫೦ ಲಕ್ಷ, ಕುಚ್ಚಾಲ-ಮೆದು ರಸ್ತೆ- ೫.೫೦ ಲಕ್ಷ, ಅಚ್ರಪ್ಪಾಡಿ ರಸ್ತೆ- ೫.೫೦ ಲಕ್ಷ, ಕರಂಗಲ್ಲು ಎಂಬಲ್ಲಿ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ೧೦ ಲಕ್ಷ ಮತ್ತು ಕಂದ್ರಪ್ಪಾಡಿ ವಾಲ್ತಾಜೆ ರಸ್ತೆ ತಡೆಗೋಡೆಗೆ ೧೫ ಲಕ್ಷ, ಮುಳಿಯಡ್ಕ -ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ ೧೫ ಲಕ್ಷ ಸೇರಿದಂತೆ ಒಟ್ಟು ೯೨ ಲಕ್ಷ ಅನುದಾನದಲ್ಲಿ ನಡೆಯುವ ಕಾಮಗಾರಿಗಳಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ, ಕ್ಯಾಂಪ್ಕೋ ನಿರ್ದೇಶಕ ಎ.ವಿ.ತೀರ್ಥರಾಮ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ ಕಂಜಿಪಿಲಿ, ಯುವಮೊರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಶಕ್ತಿಕೇಂದ್ರ ಪ್ರಮುಖರಾದ ದಿವಾಕರ ಮುಂಡೋಡಿ, ಶಾಸಕರ ಆಪ್ತ ಕಾರ್ಯದರ್ಶಿ ಪ್ರಸಾದ್ ಕಾಟೂರು , ಬೂತ್ ಸಮಿತಿ ಪ್ರಮುಖರು, ಪಕ್ಷದ ಹಿರಿಯ ಕಾರ್ಯಕರ್ತರು, ಪ್ರಮುಖರು, ರಸ್ತೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.
























