Home ಜಿಲ್ಲೆ ಮಂಗಳೂರು ದೇರಳಕಟ್ಟೆ| ಡ್ರಗ್ಸ್ ಮಾರಾಟ ಪ್ರಕರಣ : ಆರೋಪಿ ಸೆರೆ

ದೇರಳಕಟ್ಟೆ| ಡ್ರಗ್ಸ್ ಮಾರಾಟ ಪ್ರಕರಣ : ಆರೋಪಿ ಸೆರೆ

ಕೊಣಾಜೆ: ಬೆಳ್ಮ, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದು ಲಕ್ಷದ ಆರು ಸಾವಿರ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕೂಳೂರು ಕಸಬ ಬೆಂಗ್ರೆ ನಿವಾಸಿ ಝಾಕಿರ್ ಹುಸೈನ್ (೧೯) ಎಂದು ಗುರುತಿಸಲಾಗಿದೆ.
ಈತ ದೇರಳಕಟ್ಟೆ ಮೆಡಿಕಲ್ ಕಾಲೇಜು ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಆತನಿಂದ ೧೦.೬ ಗ್ರಾಂ ತೂಕದ ಎಂಡಿಎಂಎ, ಮೊಬೈಲ್ ಫೋನ್, ಸಿರಿಂಜ್, ಸಿಗರ್ ಲೈಟ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.