ದೂರ ತೀರ ಯಾನದ ಶೀರ್ಷಿಕೆ ಗೀತೆ ಬಿಡುಗಡೆ

ಜುಲೈ ೧೧ ಕ್ಕೆ ತೆರೆಗೆ

ಪಯಣದ ಕಥಾಹಂದರವನ್ನಿಟ್ಟುಕೊಂಡು ‘ದೂರ ತೀರ ಯಾನ’ ಚಿತ್ರ ಮಾಡಿದ್ದಾರೆ ನಿರ್ದೇಶಕ ಮಂಸೋರೆ. ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಾಯಕ,ನಾಯಕಿಯಾಗಿ ನಟಿಸಿರುವ ‘ದೂರ ತೀರ ಯಾನ’ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು.

ಕಿರಣ್ ಕಾವೇರಪ್ಪ ಸಾಹಿತ್ಯಕ್ಕೆ ಬಕ್ಕೇಶ್ ಹಾಗೂ ಕಾರ್ತಿಕ್ ಸಂಗೀತ ನೀಡಿದ್ದು, ಬಕ್ಕೇಶ್ – ಇಶಾ ಸುಚಿ ಧ್ವನಿಯಾಗಿದ್ದಾರೆ. ಈ ಶೀರ್ಷಿಕೆ ಗೀತೆಯನ್ನು ನಿರ್ಮಾಪಕ ದೇವರಾಜ್ ಅವರ ಪುತ್ರ ಜಯರಾಮ್ ಬಿಡುಗಡೆ ಮಾಡಿದರು. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಾಗೂ ನಟ ನವೀನ್ ಶಂಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ದೂರ ತೀರ ಯಾನ’ ದಲ್ಲಿ ಆರು ಹಾಡುಗಳು ಹಾಗೂ ಎರಡು ಮ್ಯೂಸಿಕಲ್ ಬಿಟ್ಸ್ ಇದೆ. ಹೆಸರಾಂತ ಸಂಗೀತಗಾರರು ನನ್ನೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂಗೀತ ನಿರ್ದೇಶಕ ಹಾಗೂ ಗಾಯಕ ರೋಣದ ಬಕ್ಕೇಶ್ ಹೇಳಿದರು.

ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನಿರ್ಮಾಣವಾಗಿದೆ. ಜುಲೈ ೧೧ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ದೇವರಾಜ್.

ಟೈಟಲ್ ಸಾಂಗ್ ನಲ್ಲಿ ಸಖತ್ ಎನರ್ಜಿ ಇದೆ. ಅದೇ ಎನರ್ಜಿ ಯಲ್ಲಿ ನಮ್ಮ ಚಿತ್ರತಂಡ ಕೆಲಸ ಮಾಡಿದೆ. ಇಂದು ಹಾಡು ಬಿಡುಗಡೆ ಸಮಾರಂಭ. ಹಾಗಾಗಿ ಅದರ ಬಗ್ಗೆ ಹೇಳಿದ್ದೀನಿ. ನನ್ನ ಪಾತ್ರದ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ನಾಯಕ ವಿಜಯ್ ಕೃಷ್ಣ ಹೇಳಿದರು. ಇದು ನನ್ನ ಇಷ್ಟದ ಗೀತೆ ಕೂಡ ಎಂದು ನಾಯಕಿ ಪ್ರಿಯಾಂಕ ಕುಮಾರ್ ತಿಳಿಸಿದರು.

ಎಂ ಆರ್ ಟಿ ಮ್ಯೂಸಿಕ್ ನ ಆನಂದ್, ಸಂಗೀತ ನಿರ್ದೇಶಕ ಕಾರ್ತಿಕ್, ಹಾಡು ಬರೆದಿರುವ ಕಿರಣ್ ಕಾವೇರಪ್ಪ, ಗಾಯಕಿ ಇಶಾ ಸುಚಿ ಮುಂತಾದವರು ಶೀರ್ಷಿಕೆ ಗೀತೆ ಬಗ್ಗೆ ಮಾತನಾಡಿದರು.

ದೂರ ತೀರ ಯಾನ ಬೆಂಗಳೂರಿನಿಂದ ಗೋವಾದವರೆಗೂ ನಡೆಯುವ ಪಯಣದ ಕಥೆ. ಇದು ಪ್ರೇಮ ಕಥೆಯಲ್ಲ. ನಮ್ಮ ಸಿನೆಮಾದ ಹಾಡುಗಳಲ್ಲಿ ಒಂದೇ ಒಂದು ಇಂಗ್ಲಿಷ್ ಪದ ಕೂಡ ಬಳಸದೇ ನಮ್ಮ ಸಂಗೀತ ನಿರ್ದೇಶಕರು ಹಾಗೂ ಗೀತ ಸಾಹಿತಿಗಳ ನೆರವಿನಿಂದ ಹಾಡುಗಳನ್ನು ಸಂಯೋಜಿಸಿದ್ದೇವೆ. ಇವೆಲ್ಲಾ ನಮ್ಮ ಕನ್ನಡ ಭಾಷೆಯ ಹಿರಿಮೆ. – ನಿರ್ದೇಶಕ ಮಂಸೋರೆ.