
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.24: ನಗರದ ದುರ್ಗಮ್ಮ ದೇಗುಲಕ್ಕೆ ನೊಣವಿನಕೆರೆ ಮಠದ ಕಾಡಸಿದ್ದೇಶ್ವರ ಶ್ರೀಗಳು ಇಂದು ಭೇಟಿ ನೀಡಿ ದರ್ಶನ ಪಡೆದರು. ಅವರನ್ನು ಪೂರ್ಣ ಕುಂಭದೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು.
ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು.
ಭಕ್ತರ ಅಪೇಕ್ಷೆ ಮೇರೆಗೆ ದೇವಸ್ಥಾನಕ್ಕೆ ಬಂದಿರುವೆ ಎಂದರು.ಮಳೆ ಬೆಳೆ ಸೇರಿದಂತೆ ಜನರು ಬದುಕು ಉತ್ತಮವಾಗಿರಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ರೈತರಿಗೆ ವರ್ತಕರಿಗೆ ಈ ಭಾಗದ ಎಲ್ಲರಿಗೂ ತಾಯಿ ದುರ್ಗಮ್ಮ ಆಶೀರ್ವಾದ ಮಾಡಲಿ ಎಂದು ಶ್ರೀಗಳು ಹಾರೈಸಿದರು. ಈ ವೇಳೆ ದೇವಸ್ಥಾನ ಧರ್ಮಾಧಿಕಾರಿ, ಮೇಯರ್ ಪಿ.ಗಾದೆಪ್ಪ ಮೊದಲಾದವರು ಇದ್ದರು.




















