Home ಜಿಲ್ಲೆ ದುರ್ಗಮ್ಮಗೆ ಸ್ವರ್ಣಾಲಂಕಾರ

ದುರ್ಗಮ್ಮಗೆ ಸ್ವರ್ಣಾಲಂಕಾರ

oplus_2097154

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಅ,19-  ದಸರಾ ಹಬ್ಬದ ಅಂಗವಾಗಿ ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮಗೆ ಸ್ವರ್ಣಾಲಂಕಾರದ ಪೂಜೆ ನಡೆಯುತ್ತಿದೆ.

ದುರ್ಗಾಷ್ಟಮಿ, ನವರಾತ್ರಿ ಹಾಗು ದಸರೆ ಹಿನ್ನಲೆಯಲ್ಲಿ ನಿನ್ನೆಯಿಂದ ಸ್ವರ್ಣ ಮುಖ ಕವಚದ ಅಲಂಕಾರದಿಂದ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ದಸರಾ ಅಂಗವಗಿ ದೇವಸ್ಥಾನಕ್ಕೆ ವಿವಿಧ ವರ್ಣಗಳ ವಿದ್ಯುತ್ ದೀಪದ, ಹೂವಿನ  ಅಲಂಕಾರ ಭಕ್ತರ ಗಮನ ಸೆಳೆಯುತ್ತಿದೆ.

ಅಷ್ಟೆ ಅಲ್ಲದೆ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಗಳಿಗೂ ವಿಶೇಷ ವಿದ್ಯತ್ ದೀಪಗಳನ್ನು ಅಳವಡಿಸಿದ್ದು ಮೈಸೂರು ನಗರದ ರಸ್ತೆಗಳಂತೆ ನಗರದ ರಸ್ತೆಗಳು ಜಗಮಗಿಸತೊಡಗಿವೆ.

ದಿನನಿತ್ಯ ದೇವಸ್ಥಾನ ಆವರಣದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು.ಅ. 21 ರಂದು ದುರ್ಗಮ್ಮ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ  ಹೊರಟು  ನಗರದಾಧ್ಯಂತ ಸಂಚರಿಸಿ 22 ರಂದು ಮಧ್ಯಾಹ್ನ ದೇವಸ್ಥಾನಕ್ಕೆ ಬರಲಿದೆ. 

ನವ ದುರ್ಗೆಯರ ಅಲಂಕಾರಪೂಜೆ ಜೊತೆಗೆ ಶ್ರೀಧರಗಡ್ಡೆಯ ಮರಿ ಕೊಟ್ಟೂರೇಶ್ವರ ಸ್ವಾಮಿಗಳಿಂದ ದಿನ ನಿತ್ಯ ಸಂಜೆ ದೇವಿ ಪುರಾಣ ಪ್ರವಚನ ನಡೆಯುತ್ತಿದೆ. ನಂತರ ಸಾಂಸ್ಕತಿಕ ಕಾರ್ಯಕ್ರಮಗಳ ಪ್ರದರ್ಶನ, ಬಳಿಕ ದಿನ ನಿತ್ಯ ರಾತ್ರಿ 9 ರಿಂದ ಬೆಳಿಗಿನವರೆಗೆ ಭಜನೆ ನಡೆಯುತ್ತಿದೆ.