
ಸುಳ್ಯ:ಜಟ್ಟಿಪಳ್ಳ -ನೀರಬಿದಿರೆ- ದುಗ್ಗಲಡ್ಕ ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಂಡ ಹಿನ್ನಲೆಯಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಸೋಮವಾರ ರಸ್ತೆಯನ್ನು ಉದ್ಘಾಟಿಸಿದರು.
ಸುಳ್ಯದ ಜಟ್ಟಿಪಳ್ಳ-ನೀರಬಿದಿರೆ ಮೂಲಕ ದುಗ್ಗಲಡ್ಕವನ್ನು ಸಂಪರ್ಕಿಸುವ ರಸ್ತೆ ಶಾಸಕರು ೪೫ ಲಕ್ಷ ರೂ ವಿಶೇಷ ಅನುದಾನ ಬಿಡುಗಡೆಯಾಗಿ ಕಾಮಗಾರಿ ಸಂಪೂರ್ಣಗೊಂಡಿತ್ತು. ಈ ಹಿನ್ನಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರಸ್ತೆಯನ್ನು ಉದ್ಘಾಟಿಸಿದರು.
ಅಲ್ಲದೇ ನ.ಪಂ.ಒಂದನೇ ವಾರ್ಡಿನಲ್ಲಿ ನ್ಯಾಯಬೆಲೆ ಅಂಗಡಿಯಿಂದ ಬಳಿಯಿಂದ ದುಗ್ಗಲಡ್ಕ ಶಾಲಾ ಸಮೀಪದವರೆಗೆ ರಸ್ತೆ ದುರಸ್ತಿಗೆ ೫ ಲಕ್ಷ ಅನುದಾನ, ಕೂಟೇಲ್ ರಸ್ತೆಗೆ ೧ ಲಕ್ಷ ಅನುದಾನ, ರಾಜೇಶ್ ಮಿಲಿಟರಿ ಅವರ ಮನೆಗೆ ಹೋಗುವ ರಸ್ತೆ ಮತ್ತು ಕುಸುಮಾಧರ ಅವರ ಮನೆಗೆ ಹೋಗುವ ರಸ್ತೆಗೆ ೨ ಲಕ್ಷ ಅನುದಾನ, ಒಂದು ಲಕ್ಷ ಅನುದಾನದಲ್ಲಿ ಕಂದಡ್ಕದಲ್ಲಿ ಮೋರಿ ರಚನೆಗೆ ಹಾಗೂ ಎರಡು ಲಕ್ಷ ಅನುದಾನವನ್ನು ದುಗ್ಗಲಡ್ಕ ಒಂದನೆ ವಾರ್ಡಿನ ವಿವಿಧ ಕಡೆಗಳಿಗೆ ದಾರಿದೀಪ ಅಳವಡಿಕೆ ಹಾಗೂ ಲೈನ್ ವಿಸ್ತರಣೆಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ನಗರಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ., ಕಾರ್ಯದರ್ಶಿ ನಾರಾಯಣ, ನಗರ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್, ನಗರದ ಪ್ರಮುಖರಾದ ಅವಿನಾಶ್, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಸಿಎ ಬ್ಯಾಂಕಿನ ನಿರ್ದೇಶಕರಾದ ಹೇಮಂತ್ ಕುಮಾರ್ ಕಂದಡ್ಕ, ವಾರ್ಡ್ ಅಧ್ಯಕ್ಷ ದಿನೇಶ್ ಮಣಿಯಾಣಿ, ಡಾ.ಕೇಶವ ಸುಳ್ಳಿ, ಮಾಜಿ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಶೇಖರ್ ಕುದ್ಪಾಜೆ, ಧನಂಜಯ( ಮನು), ರೂಪೇಶ್ ನೀರಬಿದಿರೆ, ನಯನ, ರಾಜೇಶ್, ಬಾಲ ಸುಬ್ರಮಣ್ಯ, ದಯಾನಂದ ಸಾಲಿಯಾನ್, ಕುಸುಮಾಧರ ಎಸ್.ಎನ್., ಶಿವನ್ ಕಂದಡ್ಕ, ಮಹೇಂದ್ರ, ಲಕ್ಷ್ಮಣ, ಲೋಕೇಶ್, ಜಯರಾಮಗೌಡ, ನಾರಾಯಣ ಮಣಿಯಾಣಿ ದುಗ್ಗಲಡ್ಕ, ನಿರಂಜನ, ತಂಗವೇಲು ,ವಸಂತ ನೀರಬಿದಿರೆ, ಚಂದ್ರಶೇಖರ ಮೋಂಟಡ್ಕ ,ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.


























