ದೀಪ್ತಿ ಕಾಟನ್ ಮಿಲ್‌ನಲ್ಲಿ ಬೆಂಕಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:
ನಗರದ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿನ ವೆಂಕಟೇಶ್ ಅವರ ಮಾಲಿಕತ್ವದ ದೀಪ್ತಿ ಕಾಟನ್ ಮಿಲ್ ನಲ್ಲಿ ಇಂದು ಬೆಳಿಗ್ಗೆ ೧೧.೩೦ ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿಹೊತ್ತಿಕೊಂಡು ಲಕ್ಷಾಂತರ ರೂ ನಷ್ಟ ಉಂಟಾಗಿದೆ.


ಹತ್ತಿಯನ್ನು ಅನ್ ಲೋಡ್ ಮಾಡುವಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಇರಬಹುದು ಎನ್ನಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ನಗರದ ಅಗ್ನಿ ಶಾಮಕ ಠಾಣೆಯ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಎಪಿಎಂಸಿ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಷ್ಟದ ಪ್ರಮಾಣ ಇನ್ನು ತಿಳಿದಿಲ್ಲ ಎಂದು ಎಪಿಎಂಸಿ ಠಾಣೆಯ ಪಿಐ ರಫೀಕ್ ಅವರು ಹೇಳಿದ್ದಾರೆ.