ದೀಪಾವಳಿ ಹಬ್ಬ ವೈಭವದ ಲಕ್ಷ್ಮೀ ಪೂಜೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.21:
ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ನಿನ್ನೆ ರಾತ್ರಿ  ಮನೆ, ವ್ಯಾಪಾರಿ ಮಳಿಗೆಗಳಲ್ಲಿ ಶ್ರದ್ದಾಭಕ್ತಿಯಿಂದ ವೈಭವದಿಂದ ಲಕ್ಷ್ಮಿ ಪೂಜೆಗೆ ನಿನ್ನೆ ನಡೆಯಿತು.
ಪೂಜೆಗಾಗಿ ಮನೆ ಮಳಿಗೆಗಳನ್ನು ಸ್ವಚ್ಚಗೊಳುಸಿ, ಕೆಲವರು ಬಣ್ಣ ಬಳಿದು. ಹೂ, ವಿದ್ಯುತ್ ದೀಪಗಳ ಅಲಂಕಾರದಿಂದ ಸಿಂಗರಿಸಲಾಗಿತ್ತು.
ಜೊತೆಗೆ ಲಕ್ಷ್ಮಿಯನ್ನು ಪ್ರತಿಷ್ಟಾಪಿಸಿ ಚಿನ್ನಾಭರಣಗಳಿಂದ ಸಿಂಗರಿಸಿ, ನೋಟು, ನಾಣ್ಯಗಳನ್ನು ಇಟ್ಟು ಪೂಜೆ ಮಾಡಲಾಗಿತ್ತು. ಪೂಜೆಗೆ ಬಂದ ಸ್ನೇಹಿತರು, ಬಂಧುಗಳು, ಹಿತೈಷಿಗಳಿಗೆ ಸಿಹಿ ನೀಡಲಾಯ್ತು.
ಪಟಾಕಿ ಸಿಡಿಸಿ ಸಂಭ್ರಮಿಸಲಾಯ್ತು.