ದಾವಣಗೆರೆ ಪೋಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಖಂಡನೆ : ಕಠಿಣ ಕ್ರಮಕ್ಕೆ ಆಗ್ರಹ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ.04: ದಾವಣಗೆರೆ ನಗರದಲ್ಲಿ ಕರ್ತವ್ಯನಿರತ ಸಿ.ಪಿ.ಐ ಶ್ರೀಮತಿ ಗಾಯತ್ರಿ ಹಾಗೂ ಪೋಲೀಸ್ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅತ್ಯಂತ ಖಂಡನೀಯ, ಅದರಲ್ಲೂ ಮಹಿಳಾ ಅಧಿಕಾರಿ, ಅವರ ಮೇಲೆ ಹಲ್ಲೆ ನಡೆಸಿದ್ದು, ಇಲ್ಲಿವರೆಗೂ ಆರೋಪಿತರನ್ನು ಬಂಧಿಸದಿರುವುದು ನಾನಾ ಅನುಮಾನ ಹಾಗೂ ಅಕ್ರೋಶಕ್ಕೆ ಕಾರಣವಾಗಿದೆ. ‌ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಸಾಮಾಜಿಕ ಹೋರಾಟಗಾರ ಸಿದ್ದೇಶ್ ಊಳೂರು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಗೃಹಸಚಿವರಿಗೆ ಮನವಿ ಸಲ್ಲಿಸಿದ್ದು ತಪ್ಪಿತಸ್ಥರು ಯಾರೇ ಇರಲಿ ಮುಲಾಜಿಲ್ಲದೇ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ.

ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅನಂದ, ತಿರಮಾಲ ಹಾವಿನಳ್, ಲಕ್ಷಣ ಮತ್ತಿತರರು ಇದ್ದರು