ದಸರೆಗೆ ಖಾಕಿ ಕಣ್ಗಾವಲು

ಮೈಸೂರು: ಸೆ.20:- ಸೆ.22ರಿಂದ ಅ.2ರವರೆಗೆ ನಡೆಯುವ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ವೇದಿಕೆ ಸಜ್ಜಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ.


ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭದ್ರತೆ ಕೈಗೊಳ್ಳಲಾಗಿದೆ. ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆÀಯ ಸಾಂಸ್ಕøತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂ ಸವಾರಿ, ಬನ್ನಿಮಂಟಪದ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ ಎಂದು ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಎರಡು ಹಂತಗಳಲ್ಲಿ ಭದ್ರತೆ:
ದಸರಾ ಉದ್ಘಾಟನೆಯಿಂದ ಅ.1ರವರೆಗೆ ಮೊದಲ ಹಂತ, ಅ.2ರಂದು ಎರಡನೇ ಹಂತದ ಭದ್ರತೆ ಕೈಗೊಳ್ಳಲಾಗಿದೆ. 6384 ಪೊಲೀಸ್ ಸಿಬ್ಬಂದಿ, 35 ಕೆಸ್‍ಆರ್‍ಪಿ, 15 ಸಿಎಆರ್, ಡಿಎಆರ್, 29 ಎಎಸ್‍ಸಿ ತಂಡ, 1 ಗರುಡ ಪೊಲೀಸ್, 1 ಆರ್‍ಎಎಫ್, 1200 ಹೋಂ ಗಾರ್ಡ್‍ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಂದ ಅಪರಾಧಿಗಳು ಬಂದು ಅಪರಾಧ ಕೃತ್ಯ ಎಸಗುವುದನ್ನು ತಡೆಗಟ್ಟಲು ನುರಿತ ಅಪರಾಧ ವಿಭಾಗದ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಸೆ.22ರಿಂದ ಅ.1ರವರೆಗೆ ಸಂಚಾರ ನಿಯಂತ್ರಣಕ್ಕೆ ಎಲ್ಲಾ ಪ್ರಮುಖ ಜಂಕ್ಷನ್‍ಗಳು, ಪ್ರವಾಸಿ ಸ್ಥಳಗಳ ಬಳಿ 43 ಟ್ರಾಫಿಸ್ ಪೊಲೀಸರು, ಅ.2ರಂದು ಜಂಬೂ ಸವಾರಿ ಸಾಗುವ ಮಾರ್ಗ, ಅರಮನೆ ದ್ವಾರಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು 33 ಸಿವಿಲ್ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.


200 ಸಿಸಿ ಕ್ಯಾಮರಾ ಅಳವಡಿಕೆ:
ದಸರಾ ಭದ್ರತೆಗಾಗಿ ನಗರದಲ್ಲಿ ಈಗಾಗಲೇ ಇರುವ 30,614 ಸಿಸಿ ಕ್ಯಾಮರಾಗಳ ಜತೆಗೆ, ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ, ಇತರೇ ಪ್ರಮುಖ ಸ್ಥಳಗಳಲ್ಲಿ 200 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 32 ಅಗ್ನಿಶಾಮಕ ದಳ, 26 ಆಂಬುಲೆನ್ಸ್‍ಗಳನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.


ಸಹಾಯ ಕೇಂದ್ರಗಳ ಸ್ಥಾಪನೆ:
ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೆÇಲೀಸ್ ಸಹಾಯ ನೀಡಲು ನಗರದ ಪ್ರಮುಖ ಸ್ಥಳಗಳಲ್ಲಿ ಪೆÇಲೀಸ್ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಪೆÇಲೀಸ್ ಸಹಾಯಕೇಂದ್ರಕ್ಕೆ ನಿಯೋಜಿಸಿರುವ ಪೆÇಲೀಸರು, ಪ್ರವಾಸಿಮಿತ್ರರು, ಪ್ರವಾಸಿಗರಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಏಕಮುಖ ಸಂಚಾರ, ರಕ್ಷಣಾ ವ್ಯವಸ್ಥೆ ಕುರಿತು ಮಾಹಿತಿ ನೀಡಲಿದ್ದಾರೆ. ಜತೆಗೆ ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಮಾಹಿತಿಗಾಗಿ, ಯಶಸ್ವಿ ದಸರಾ ಆಚರಣೆಗೆ ಪೊಲೀಸರ ಪಾತ್ರದ ಕುರಿತು ಮಾಹಿತಿ ನೀಡದಲು ಕಿರು ಹೊತ್ತಿಗೆ ವಿತರಿಸಲಾಗುವುದು ಎಂದರು.


ಭದ್ರತಾ ವ್ಯವಸ್ಥೆ:
ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ ಕಣ್ಗಾವಲು ಇಡಲಾಗುವುದು. ನಗರದ ಲಾಡ್ಜ್‍ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗುವುದು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ 247 ಅಪರಾಧ ವಿಭಾಗದ ನಿಯೋಜನೆ ಜತೆಗೆ, ನಗರ ವ್ಯಾಪ್ತಿಯಲ್ಲಿ 247 ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ರೌಡಿ ಪರೇಡ್ ನಡೆಸಿ ದಸರಾ ಸಂದರ್ಭದಲ್ಲಿ ಅಪರಾಧಿಕ ಕೃತ್ಯದಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗುವುದು. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಹಾಸಿಗೆ ಕಾಯ್ದಿರಿಸಲು ಸೂಚನೆ ನೀಡಲಾಗಿದೆ. ಜತೆಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಶಿಥಿಲಾವಸ್ಥೆಯ, ನಿರ್ಮಾಣ ಹಂತದ ಕಡ್ಡಗಳನ್ನೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಫೋಟೊ, ವಿಡಿಯೋಗಳನ್ನು ಹಾಕಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿಗಾ ವಹಿಸಲು ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‍ಗೆ 52 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಸಿಪಿಗಳಾದ ಸುಂದರ್‍ರಾಜ್, ಬಿಂದುಮಣಿ ಇದ್ದರು.