Home ಜಿಲ್ಲೆ ಮೈಸೂರು ದಸರಾ ಜಂಬೂಸವಾರಿ- ಪ್ರಶಾಂತ ಆನೆಗೆ ವಿಶೇಷ ನಮ್ದಾ-ಗಾದಿ ಸಿದ್ಧತೆ

ದಸರಾ ಜಂಬೂಸವಾರಿ- ಪ್ರಶಾಂತ ಆನೆಗೆ ವಿಶೇಷ ನಮ್ದಾ-ಗಾದಿ ಸಿದ್ಧತೆ

ಸಂಜೆವಾಣಿ ನ್ಯೂಸ್
ಮೈಸೂರು:ಅ.16:-
ನಾಡಹಬ್ಬ ದಸರಾದ ಜಂಬೂಸವಾರಿಗೆ ದಿನಗಣನೆ ಶುರುವಾಗಿದ್ದು, 750 ಕೆಜಿ ಚಿನ್ನದ ಅಂಬಾರಿ ಹೊರುವ 54 ವರ್ಷದ ಪ್ರಶಾಂತ ಆನೆಯ ಸುರಕ್ಷತೆಗಾಗಿ ನಮ್ದಾ-ಗಾದಿ ತಯಾರಿಸುವ ಕೆಲಸ ಅರಮನೆ ಆವರಣದಲ್ಲಿ ಜೋರಾಗಿ ನಡೆದಿದೆ.


ನಮ್ದಾ-ಗಾದಿ ಯಾಕೆ ಇಷ್ಟೊಂದು ಮುಖ್ಯ ಚಿನ್ನದ ಅಂಬಾರಿಯನ್ನು 5 ಕಿಲೋಮೀಟರ್ ಹೊತ್ತು ಸಾಗುವ ಆನೆಗೆ ಗಾಯವಾಗದಿರಲು ಇದನ್ನು ಬಳಸಲಾಗುತ್ತದೆ. ಭಾರವಾದ ಅಂಬಾರಿ ನೇರವಾಗಿ ಆನೆಯ ಬೆನ್ನಿಗೆ ತಾಗಿದರೆ ಗಾಯವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆನೆಗೆ ನೋವಾಗದಿರಲು ಮೃದುವಾದ ರಕ್ಷಣಾ ಪದರವಾಗಿ ನಮ್ದಾ-ಗಾದಿಯನ್ನು ಹಾಕಲಾಗುತ್ತದೆ.


ನಮ್ದಾ-ಗಾದಿ ಹೇಗೆ ತಯಾರಿಸುತ್ತಾರೆ?
ಆನೆಯ ಬೆನ್ನಿನ ಮೇಲೆ ಹಾಕುವ ಹತ್ತಿಯಂತಹ ಮೃದುವಾದ ಹಾಸಿಗೆಯೇ ನಮ್ದಾ. ಇದನ್ನು ತೆಂಗಿನ ನಾರು ಮತ್ತು ಭತ್ತದ ಹುಲ್ಲಿನಿಂದ ವಿಶೇಷವಾಗಿ ತಯಾರಿಸಲಾಗುತ್ತದೆ. ಮೊದಲು ಆನೆ ಮೇಲೆ ನಮ್ದಾ-ಗಾದಿ ಹಾಕಿ, ನಂತರವೇ ಚಿನ್ನದ ಅಂಬಾರಿಯನ್ನು ಕೂರಿಸಲಾಗುತ್ತದೆ. ಇದರಿಂದ ಆನೆಗೆ ಯಾವುದೇ ಗಾಯವಾಗುವುದಿಲ್ಲ.
ಕಳೆದ 30 ವರ್ಷಗಳಿಂದ ಚಿನ್ನದ ಅಂಬಾರಿ ಕಟ್ಟುವ ಕೆಲಸ ಮಾಡುತ್ತಿರುವ ಅಕ್ರಂ ಅವರು ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ಈ ಬಾರಿಯ ನಮ್ದಾ-ಗಾದಿಯನ್ನು ಸಿದ್ಧಪಡಿಸುತ್ತಿದ್ದಾರೆ.