ಸಂಜೆವಾಣಿ ನ್ಯೂಸ್
ಮೈಸೂರು : ಸೆ.23:- ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಾಡಿನ ಗಂಡುಕಲೆ ಕುಸ್ತಿ ಪಂದ್ಯಾವಳಿಗೆ ಅರಮನೆ ನಗರಿಯ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.
ಕುಸ್ತಿ ಪಂದ್ಯಾವಳಿಗೆ ಸಿದ್ದರಾಮಯ್ಯ ಕುಸ್ತಿಪಟುಗಳಿಗೆ ಬೆನ್ನು ತಟ್ಟುವ ಮೂಲಕ ಚಾಲನೆ ನೀಡಿದರು. ಅಲ್ಲದೆ ಕುಸ್ತಿ ವೀಕ್ಷಿಸಿ ಪೈನ್ವಾಲ್‍ಗಳ್ನನು ಪ್ರೋತ್ಸಾಹಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪೈಲ್ವಾನರು ಮಟ್ಟಿ ಏರಿ ಜಟ್ಟಿತನ ಮೆರೆದರು.
ಮೈಸೂರಿನ ಮಹದೇಪುರ ಪೈಲ್ವಾನ್ ವಿಕಾಸ್ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಕಿರಣ್ ನಡುವೆ ನಡೆದ 30 ನಿಮಿಷದ ಮೊದಲ ಕುಸ್ತಿ ಪೈಪೆÇೀಟಿಯಿಂದ ನಡೆಯಿತು. ಅಂತಿಮವಾಗಿ 22 ನಿಮಿಷದಲ್ಲಿ ಪೈಲ್ವಾನ್ ವಿಕಾಸ್ ಜಯಶೀಲರಾದರು.
ಮಹಿಳಾ ಕುಸ್ತಿ ಪಟುಗಳಾದ ಬೆಂಗಳೂರಿನ ಪುಷ್ಪ ಹಾಗೂ ಬೆಳಗಾವಿಯ ನಂದಿನಿ ನಡುವೆ ನಡೆದ ಕುಸ್ತಿಯಲ್ಲಿ 1 ನಿಮಿಷ 10 ಸೆಕೆಂಡ್‍ನಲ್ಲಿ ನಂದಿನಿ ಜಯಗಳಿಸಿದರು. ಅಥಣಿಯ ಪೈಲ್ವಾನ್ ಸುರೇಶ್ ಲಂಕೋಟಿ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಹನುಮಂಥ ವಿಠಲ ಬೇವಿನ ಮರ ನಡುವೆ ನಡೆದ ಕುಸ್ತಿ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರು ಕೂಡ ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚೆಪ್ಪಾಳೆ, ಸಿಳ್ಳೆ ಮೂಲಕ ಪೆÇ್ರೀತಾಹಿಸಿದರು.
ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ರವಿಶಂಕರ್.ಡಿ, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಇತರರು ಇದ್ದರು.


























