Home ಜಿಲ್ಲೆ ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ 48 ಗಂಟೆಗಳ ಕಂಬಳ- ವಿಶೇಷ ಟ್ರ್ಯಾಕ್‍ನಲ್ಲಿ ಕೋಣಗಳ ತಾಲೀಮು...

ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ 48 ಗಂಟೆಗಳ ಕಂಬಳ- ವಿಶೇಷ ಟ್ರ್ಯಾಕ್‍ನಲ್ಲಿ ಕೋಣಗಳ ತಾಲೀಮು ಆರಂಭ

ಸಂಜೆವಾಣಿ ನ್ಯೂಸ್
ಮೈಸೂರು:ಅ.16:-
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ತಾಯಿ ಚಾಮುಂಡೇಶ್ವರಿಯ ಸ್ಮರಣೆಯೊಂದಿಗೆ ಮೈಸೂರು ವಿಜಯದಶಮಿ ಕಂಬಳದ ತಾಲೀಮು ಆರಂಭಗೊಂಡಿದೆ.


ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ 17 ರಿಂದ 19 ರವರೆಗೆ ಸತತ 48 ಗಂಟೆಗಳ ಕಾಲ ಕಂಬಳ ಆಯೋಜಿಸಲಾಗಿದ್ದು, ಇದಕ್ಕಾಗಿ ಮೈಸೂರಿನಲ್ಲಿ ವಿಶೇಷ ಟ್ರ್ಯಾಕ್ ನಿರ್ಮಿಸಲಾಗಿದೆ.


ಕೆರೆ ಅಥವಾ ಗದ್ದೆಯಲ್ಲಿ ಅಲ್ಲ, ಕರಾವಳಿ ಮಾದರಿಯಲ್ಲೇ ವೈಜ್ಞಾನಿಕವಾಗಿ ಕೆಸರು ನೀರು ತುಂಬಿದ 120 ಮೀಟರ್ ಉದ್ದದ ಟ್ರ್ಯಾಕ್ ಸಿದ್ಧಪಡಿಸಲಾಗಿದೆ.
ಇಂದು ನಡೆದ ತಾಲೀಮಿನಲ್ಲಿ ಕಂಬಳದ ಕೋಣಗಳು ನೀರಿನಲ್ಲಿ ಅಬ್ಬರಿಸಿ ಓಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
48 ಗಂಟೆಗಳ ಕಾಲ ನಡೆಯಲಿರುವ ಈ ಕಂಬಳದಲ್ಲಿ ಕರಾವಳಿಯಿಂದ 100ಕ್ಕೂ ಹೆಚ್ಚು ಜೋಡಿ ಸ್ಪರ್ಧಾ ಕೋಣಗಳು ಭಾಗವಹಿಸಲಿದ್ದು, ಮೈಸೂರು ದಸರಾಗೆ ಇದು ಹೊಸ ಆಕರ್ಷಣೆ ಸೇರ್ಪಡೆಯಾದಂತಾಗಿದೆ.