ದಲೈ ಲಾಮಾಗೆ ಗ್ರ್ಯಾಮಿ ಪ್ರಶಸ್ತಿ

ನವದೆಹಲಿ, ಫೆ.2:- 90ನೇ ವಯಸ್ಸಿನಲ್ಲಿ ದಲೈ ಲಾಮಾ ಅತ್ಯುತ್ತಮ ಆಡಿಯೊ ಪುಸ್ತಕ, ನಿರೂಪಣೆ ಮತ್ತು ಕಥೆ ಹೇಳುವ ರೆಕಾರ್ಡಿಂಗ್ ಗಾಗಿ ತಮ್ಮ ಮೊದಲ ಗ್ರ್ಯಾಮಿ ಗೌರವಕ್ಕೆ ಭಾಜನರಾಗಿದ್ದಾರೆ. ಲಾಸ್ ಏಂಜಲೀಸ್ ನ ಕ್ರಿಪೆÇ್ಟೀ ಅರೆನಾದಲ್ಲಿ 68ನೇ ಗ್ರ್ಯಾಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.


ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು `ಮೆಡಿಟೇಷನ್ಸ್: ದಿ ರಿಫ್ಲೆಕ್ಷನ್ಸ್ ಆಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ’ ಪ್ರಶಸ್ತಿಯನ್ನು ಗೆದ್ದರು. ಅಮೆರಿಕನ್ ಗಾಯಕರಾದ ಮ್ಯಾಗಿ ರೋಜರ್ಸ್ ಮತ್ತು ಆಂಡ್ರಾ ಡೇ ಅವರೊಂದಿಗೆ ಆಲ್ಬಂನಲ್ಲಿ ಕಾಣಿಸಿಕೊಳ್ಳುವ ಕೆನಡಿಯನ್-ಅಮೆರಿಕನ್ ಗಾಯಕ ರೂಫಸ್ ವೈನ್ ರೈಟ್ ದಲೈ ಲಾಮಾ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
“ಈ ಯೋಜನೆಯಲ್ಲಿ ಭಾಗವಹಿಸುವುದು ಒಂದು ಭಾಗ್ಯ. ಪರಮಪೂಜ್ಯ ದಲೈ ಲಾಮಾ ಅವರ ಪರವಾಗಿ ಈ ಮನ್ನಣೆಯನ್ನು ಸ್ವೀಕರಿಸುವುದು ಗೌರವವಾಗಿದೆ, ಅವರ ಬುದ್ಧಿವಂತಿಕೆಯು ಈ ಕೆಲಸದ ಹೃದಯಭಾಗದಲ್ಲಿದೆ” ಎಂದು ವೈನ್ ರೈಟ್ ಚಿನ್ನದ ಗ್ರಾಮಫೆÇೀನ್ ಸ್ವೀಕರಿಸುವಾಗ ಹೇಳಿದರು. ಪ್ರಶಸ್ತಿ ಪಟ್ಟಿಯಲ್ಲಿ ಭಾರತ ಇದ್ದಿತಾದರೂ ಗೋಲ್ಡನ್ ಗ್ರಾಮಫೆÇೀನ್ ಪಡೆಯುವಲ್ಲಿ ವಿಫಲಗೊಂಡಿದೆ.