
ಬೆಂಗಳೂರು,ಡಿ.11:– ಹಿಂದುಳಿದ ವರ್ಗಕ್ಕೆ ಸೇರಿದ ದೇವರಾಜ ಅರಸ್, ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕರು ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಆದರೆ ಪರಿಶಿಷ್ಠ ಜಾತಿಯ ನಾಯಕರಿಗೆ ಇದುವರೆಗೂ ಮುಖ್ಯಮಂತ್ರಿ ಸ್ಥಾನ ದೊರೆಯದಿರುವ ಹಿನ್ನಲೆ ಪರಿಶಿಷ್ಠ ಜಾತಿಯ ನಾಯಕರೊಬ್ಬರನ್ನ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಬೇಕೆಂದು ಕರ್ನಾಟಕ ಐಕ್ಯತಾ ಒಕ್ಕೂಟ ಕರೆ ನೀಡಿದೆ.
ದಲಿತ ಸಮುದಾಯಕ್ಕೆ ಸೇರಿದ ರಾಜಕೀಯದಲ್ಲಿ ಹೆಚ್ಚು ಅನುಭವವಿರುವ ಹಿರಿಯ ದಲಿತ ಮುಖಂಡ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕರ್ನಾಟಕ ಐಕ್ಯತಾ ಒಕ್ಕೂಟ ಕರೆ ನೀಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮುಜಾಹೀದ್ ಅಲಿ ಬಾಬಾ,ಹಿಂದೂ ಧರ್ಮದ ಭಾಗವಾಗಿರುವ ದಲಿತ ಸಮುದಾಯಕ್ಕೆ ಇದುವರೆಗೂ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ,
ಒಕ್ಕಲಿಗ, ಲಿಂಗಾಯತ, ಕುರುಬ, ಈಡಿಗ, ಸವಿತಾ ಸೇರಿದಂತೆ ವಿವಿಧ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾರೆ ,ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿರುವ ದಲಿತ ಸಮುದಾಯಕ್ಕೆ ನೀಡಬೇಕು.ಹಿಂದೂ ಧರ್ಮದ ಬಗ್ಗೆ ಮಾತನಾಡುವವರು ದಲಿತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು,ಏಳು ಭಾರೀ ಗೆಲುವು ಸಾಧಿಸಿರುವ ಕೆ.ಎಚ್. ಮುನಿಯಪ್ಪ ಹಾಗೂ ಉಪ ಮುಖ್ಯಮಂತ್ರಿ, ಗೃಹ ಸಚಿವರಾಗಿ ಕಾರ್ಯನಿರ್ವಹಿಸಿರುವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನಕ್ಕೆ ಸಮರ್ಥರಾಗಿದ್ದಾರೆ.ಕಾಂಗ್ರೆಸ್ ಕೇವಲ ದಲಿತರು ಮತ್ತು ಮುಸ್ಲಿಂರ ನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ.ಮುಸ್ಲಿಂರಲ್ಲಿ ಸಮರ್ಥರಾದ ಯು.ಟಿ.ಖಾದರ್, ರಿಜ್ವಾನ್ ಹರ್ಷದ್, ತಸ್ವೀರ್ ಸೇರ್ ಅವರಿಗೆ ಸಚಿವ ಸ್ಥಾನ ನೀಡದೇ ಕೆಲಸಕ್ಕೆ ಬಾರದ ರಹೀಂ ಖಾನ್,ಜಮೀರ್ ಅಹಮ್ಮದ್ ಅವರನ್ನು ನೇಮಕ ಮಾಡಲಾಗಿದೆ.ಇದುವರೆಗೂ ಮುಸ್ಲಿಂ ಸಮುದಾಯದವರಿಗೆ ಗೃಹ,ಲೋಕೋಪಯೋಗಿಯಂತಹ ಖಾತೆ ನೀಡಿಲ್ಲ ಎಂದರು.
ಪಕ್ಷ ವಕ್ಸ್ ಬೋರ್ಡ್ ಅಧ್ಯಕ್ಷರಾಗಿ ಒಂದು ವರ್ಷದ ಹಿಂದೆ ನೇಮಕಗೊಂಡಿರುವ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರಿಗೆ ಸರಿಯಾದ ರೀತಿ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದರು.




























