Home ಜಿಲ್ಲೆ ಮಂಗಳೂರು ದಲಿತ ಸಮುದಾಯ ಭೂಮಿಗೆ ಅರಣ್ಯ ಇಲಾಖೆ ಕಣ್ಣು ದಲಿತ ಹಕ್ಕು ಸಮಿತಿಯಿಂದ ಇಲಾಖೆಗಳಿಗೆ ಮನವಿ

ದಲಿತ ಸಮುದಾಯ ಭೂಮಿಗೆ ಅರಣ್ಯ ಇಲಾಖೆ ಕಣ್ಣು ದಲಿತ ಹಕ್ಕು ಸಮಿತಿಯಿಂದ ಇಲಾಖೆಗಳಿಗೆ ಮನವಿ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಪುತ್ತೂರು; ದಲಿತವರ್ಗಕ್ಕೆ ಭೂಮಿ ನೀಡಿ ಇದೀಗ ಆ ಭೂಮಿಯನ್ನು ಅರಣ್ಯ ಇಲಾಖೆ ನುಂಗಲು ಯತ್ನಿಸುತ್ತಿದೆ. ಇದು ದಲಿತ ಸಮಾಜದ ಬಗ್ಗೆ ಸಾಮಾಜಿಕ ಅಸಮಾನತೆಯ ಕೀಳರಿಮೆಯನ್ನು ಸರ್ಕಾರಿ ಇಲಾಖೆ ಮೂಲಕ ನಡೆಸಲಾಗುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಸಿಪಿಐಎಂ ಪುತ್ತೂರು ತಾಲೂಕು ಮುಖಂಡ ವಕೀಲರಾದ ಪಿ.ಕೆ.ಸತೀಶನ್ ಅವರು ಹೇಳಿದರು.
ಅವರು ಶನಿವಾರ ದಲಿತ ಸಮುದಾಯದ ಭೂಮಿ ರಕ್ಷಣೆಗೆ ಆಗ್ರಹಿಸಿ ಸಹಾಯಕ ಕಮೀಶನರ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದರು.
ಪುತ್ತೂರು ತಾಲೂಕಿನ ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮದಲ್ಲಿ ದಲಿತ ಸಮುದಾಯದ ಕೆಲ ಕುಟುಂಬಗಳಿಗೆ ೧೯೮೧-೮೩ರಲ್ಲಿ ದರ್ಖಾಸ್ ಮೂಲಕ ಜಮೀನು ನೀಡಿ ಸಾಗುವಳಿಚೀಟಿಯನ್ನು ಕೊಡಲಾಗಿತ್ತು. ಇದೀಗ ೪೦ ವರ್ಷಗಳ ತರುವಾಯ ಈ ಜಾಗ ತಮ್ಮದು ಎಂದು ಅರಣ್ಯ ಇಲಾಖೆ ಗುಲ್ಲೆಬ್ಬಿಸಿ ನೋಟೀಸು ಜಾರಿ ಮಾಡುವ ಮೂಲಕ ಬಡ ದಲಿತ ಕುಟುಂಬಗಳ ಬದುಕಿಗೆ ಭೀತಿ ಉಂಟು ಮಾಡಿದೆ. ಆ ಕುಟುಂಬಗಳಲ್ಲಿ ಅಭದ್ರತೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ. ಇದು ಖಂಡನೀಯ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸುಮಾರು ೨೫ ಮಂದಿಯ ನಿಯೋಗ ದಲಿತ ಹಕ್ಕು ಸಮಿತಿ ನೇತೃತ್ವದಲ್ಲಿ ಪುತ್ತೂರು ಸಹಾಯಕ ಕಮೀಶನರಿಗೆ ಮನವಿ ನೀಡಿ ಅರಣ್ಯ ಇಲಾಖೆಯ ಕಿರುಕುಳದಿಂದ ತಪ್ಪಿಸಲು ಮತ್ತು ಭೂಮಿ ಪ್ಲಾಟಿಂಗ್ ಮಾಡಿಸಿಕೊಡಲು ವಿನಂತಿಸಲಾಯಿತು. ಜತೆಗೆ ನಿಯೋಗವು ಅರಣ್ಯ ಇಲಾಖೆಗೆ ಭೇಟಿ ನೀಡಿ ಅರಣ್ಯಾಧಿಕಾರಿಯವರಿಗೂ ಮನವಿ ನೀಡಿ ಜಂಟಿ ಸರ್ವೆ ಮಾಡಿಸಿ ದಲಿತರ ಭೂಮಿಯ ಸುದ್ದಿಗೆ ಅರಣ್ಯ ಇಲಾಖೆ ಬಾರದಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್, ದಲಿತ ಹಕ್ಕು ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷರಾದ ಚಿದಾನಂದ, ತಾಲೂಕು ಸಮಿತಿಯ ಖಜಾಂಜಿ ಸುಂದರ, ನಿಡ್ಪಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಕೃಷ್ಣ ನಿಡ್ಪಳ್ಳಿ ಮತ್ತಿತರರು ಇದ್ದರು. ಈ ವಿಚಾರಕ್ಕೆ ಸಂಬಂಧಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ನ್ಯಾಯದ ಭರವಸೆ ದೊರೆತಿದೆ ಎಂದು ನಿಯೋಗ ತಿಳಿಸಿದೆ.