ದತ್ತಸೇನೆ ವತಿಯಿಂದ ಬೃಹತ್ ಶೋಭಾಯತ್ರೆ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.02:
– ಮೈಸೂರಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಗುರುಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿರವರ 83ನೇ ವರ್ಧಂತಿ ಹುಟ್ಟುಹಬ್ಬದ ಅಂಗವಾಗಿ ದತ್ತಸೇನೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಶೋಭಾಯತ್ರೆಯಲ್ಲಿ ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಟಿಎಸ್. ಶ್ರೀವತ್ಸ ರವರು ಚಾಲನೆ ನೀಡಿದರು.


ಚಾಮುಂಡಿಪುರಂ ವೃತ್ತದಿಂದ ಜಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆ ಮಾರ್ಗವಾಗಿ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ಸಾಗಿದ ಶೋಭಾಯಾತ್ರೆಯಲ್ಲಿ ನಾದಸ್ವರ ಮಂಗಳವಾದ್ಯ, ವೇದಬಳಗ, ನಂದಿಧ್ವಜ, ಚಂಡೆ ವಾದ್ಯ, ವೀರಗಾಸೆ, ಮಹಿಳಾ ಭಜನಾ ಮಂಡಳಿ, ಗಣಪತಿ ಸ್ವಾಮೀಜಿಯ ಸಾರೋಟು, ವೆಂಕಟೇಶ್ವರ ಮೂರ್ತಿ ಸಾಗಿದವು ಭಕ್ತರು ಜಯಗುರುದತ್ತ ಶ್ರೀಗುರುದತ್ತ ಜೈಕಾರದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.


ಇದೇ ಸಂಧರ್ಭದಲ್ಲಿ ಶಾಸಕ ಟಿಎಸ್. ಶ್ರೀವತ್ಸ ರವರು ಮಾತನಾಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ಮೈಸೂರಿಗೆ ಆಧ್ಯಾತ್ಮಿಕ ಧಾರ್ಮಿಕ ಸಾಮಾಜಮುಖಿ ಜೊತೆಯಲ್ಲೆ ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆಯನ್ನ ನೀಡಿದ್ದಾರೆ, ಭಜನೆಯಿಂದ ಮನಸ್ಸನ ನಿಗ್ರಹಿಸಿ ಸಾಧನೆಯತ್ತ ಜೀವನ ಸಾಗಿಸಬಹುದು ದೇಹವನ್ನ ವೈಜ್ಞಾನಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಂದೇಶ ಸಾರಿದ್ದಾರೆ, ಮತ್ತು ಕಾರ್ಯ ಆಂಜನೇಯನ ಸನ್ನಿಧಿಯನ್ನ ವಿದೇಶದಲ್ಲೂ ಸ್ಥಾಪಿಸಿ ವಿದೇಶಿಗರು ಕೂಡ ಹನುಮಾನ್ ಚಾಲೀಸ ಮತ್ತು ಭಗವದ್ಗೀತೆ ಪಠಣ ಮಾಡಲು ಗಣಪತಿ ಸ್ವಾಮೀಜಿ ಪ್ರೇರಣೆಯಾಗಿದ್ದಾರೆ, ಕೋವಿಡ್ ಸಂಧರ್ಭದಲ್ಲಿ ಪ್ರತಿದಿನ ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕೀಯ ನೆರವು ಅನ್ನದಾಸೋಹ ನೆರವನ್ನ ನೀಡಿದ್ದನ್ನ ಸ್ಮರಿಸಿದರು,


ಶಾಸಕ ಟಿಎಸ್. ಶ್ರೀವತ್ಸ, ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎನ್.ಎಂ ನವೀನ್ ಕುಮಾರ್, ದತ್ತಸೇನೆಯ ಅಧ್ಯಕ್ಷ ಆರ್. ಎಸ್ ಸತ್ಯನಾರಾಯಣ, ಬ್ರಾಹ್ಮಣ ಮಹಾಸಭಾ ಮೈಸೂರು ಪ್ರತಿನಿಧಿ ಲಕ್ಷ್ಮಿದೇವಿ, ಮಾಜಿ ನಗರ ಪಾಲಿಕೆ ಸದಸ್ಯರಾದ ಮಾವಿ ರಾಂಪ್ರಸಾದ್, ಎಂಡಿ ಪಾರ್ಥಸಾರಥಿ, ಸೌಭಾಗ್ಯಮೂರ್ತಿ, ಕೇಬಲ್ ಮಹೇಶ್, ಬಿಜೆಪಿ ಕೆಆರ್ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ಹಿಂದುಳಿದ ವರ್ಗದ ಮುಖಂಡ ಜೋಗಿ ಮಂಜು, ಆಧ್ಯಾತ್ಮಿಕ ಚಿಂತಕ ಸುರೇಶ್ ರುಗ್ವೇದಿ, ಸಪ್ತರ್ಷಿ ಬ್ಯಾಂಕ್ ನಿರ್ದೇಶಕ ರಾಜಕುಮಾರ್, ಬಸವಬಳಗ ಅಧ್ಯಕ್ಷ ಸಿ. ಸಂದೀಪ್, ಪತ್ರಕರ್ತ ಅನಿಲ್ ಕುಮಾರ್, ನಿರೂಪಕ ಅಜಯ್ ಶಾಸ್ತ್ರಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿವಿ ಗಧಾದರ್, ಕೆಆರ್ ಬ್ಯಾಂಕ್ ನಿರ್ದೇಶಕ ಹೆಚ್. ವಿ ಭಾಸ್ಕರ್, ಬಿಜೆಪಿ ಯುವ ಅಧ್ಯಕ್ಷ ರಾಕೇಶ್ ಗೌಡ, ಶ್ರೀಕಾಂತ್ ಕಶ್ಯಪ್, ವಾಸುದೇವಮೂರ್ತಿ, ರಾಮಾನುಜ ಸಂಘದ ಟಿಎಸ್. ಅರುಣ್, ವಿವೇಕಾನಂದ ಬ್ರಾಹ್ಮಣ ಸಂಘದ ಮಂಜುನಾಥ್, ಸುನೀಲ್, ಕೆಆರ್ ಎಸ್ ವಿಜಯಕುಮಾರ್, ಗುರುರಾಜ್, ಮಿರ್ಲೆ ಪಣೀಶ್, ಪ್ರವೀಣ್ ಕುಮಾರ್, ಹೊಯ್ಸಳ ಪಳನಿ, ಮಧೂಸೂದನ್, ಮುರಳಿ, ಜಗದೀಶ್, ಹೊಮ್ಮ ಮಂಜುನಾಥ್, ಕಂಸಾಳೆ ರವಿ, ಇನ್ನಿತರರು ಇದ್ದರು.