(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ,14– ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಸಿಬಿಎಸ್ ಸಿ ಶಾಲೆಯ ದಕ್ಷಿಣ ಭಾರತ ವಲಯ ಮಟ್ಟದ ಪಂದ್ಯಾವಳಿಯಲ್ಲಿ ನಗರದ ಡ್ರೀಮ್ ವರ್ಲ್ಡ್ ಶಾಲೆಯ ತಂಡ 1.0 ಗೋಲುಗಳಿಂದ ಸಾನ್ವಿ ಕುಡಪಲಿ ನಾಯಕತ್ವದಲ್ಲಿ ವಿಜಯ ಸಾಧಿಸಿದೆ.
ಕೇರಳದ ಪಾಲಕ್ಕಾಡಿನ ಸೇಂಟ್ ಪೌಲ್ಸ್ ಸೆಂಟ್ರಲ್ ಸ್ಕೂಲ್ ವಿರುದ್ದ ವಿಜಯ ಸಾಧಿಸಿದೆ. ದಕ್ಷಿಣ ಭಾರತದಿಂದ 9 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.























