ದಕ್ಷಿಣ ಕೊರಿಯಾ ಸಿಯೋಲ್ ನಲ್ಲಿಕೋರಿಯಾ ಕನ್ನಡ ಕೂಟದಿಂದ ಕರ್ನಾಟಕ ರಾಜ್ಯೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.24:
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಇಟಾವನ್‌ನ  ಲ್ಲಿಿರುವ ಸರವಣ ಭವನ ರೆಸ್ಟೊರೆಂಟ್‌ನಲ್ಲಿಅಲ್ಲಿನ ಕನ್ನಡಿಗರು ಸೇರಿ
೭೦ನೇ ಕರ್ನಾಟಕ ರಾಜ್ಯೋತ್ಸವವನ್ನುಸಂಭ್ರಮದಿಂದ ಆಚರಿಸಿದ್ದಾರೆ.
 ಕನ್ನಡದ ಮನಸ್ಸುಗಳೆಲ್ಲ  ರಾಜ್ಯೋತ್ಸವದ ಸಂಭ್ರಮಕ್ಕಾಗಿ ಒಂದೇ ವೇದಿಕೆಯಲ್ಲಿ ಸೇರಿದವರನ್ನು  ಬಳ್ಳಾರಿ ಜಿಲ್ಲೆಯ ಕೊಂಚಿಗೇರಿ ಗ್ರಾಮದ ಶಂಭುಲಿಂಗ ಸ್ವಾಗತಿಸಿದರು.
 ತಾಯಿ ಭುವನೇಶ್ವರಿಯ ಪೂಜೆ ಮತ್ತು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ನಾಡಗೀತೆಯ ಗಾಯನ ಎಲ್ಲರಲ್ಲೂ ಕನ್ನಡಾಭಿಮಾನ ಮತ್ತು ರೋಮಾಂಚನವನ್ನು ಮೂಡಿಸಿತು.ಮಂಜುನಾಥ್
 ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಕೋರಿಯಾ ಕನ್ನಡ ಕೂಟ  ಸಂಸ್ಥಾಪಕರಲ್ಲೊಬ್ಬರಾದ ಯಾದಗಿರಿಯ ನವನೀತ್ ಅವರು ಕೂಟದ ಉದ್ದೇಶ, ಸಂಘಟನೆಯ ಬೆಳವಣಿಗೆ, ಮತ್ತು ಹಿಂದಿನ ಕನ್ನಡ ಚಟುವಟಿಕೆಗಳ ಕುರಿತು ವಿವರಿಸಿದರು. ನಂತರ, ಮಂಡ್ಯದ ಕಿಶೋರ್ ಕೂಟದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯ ಅನುಭವವನ್ನು ಹಂಚಿಕೊಂಡರು.
ಕರ್ನಾಟಕ ಏಕೀಕರಣ ಮತ್ತು ರಾಜ್ಯೋತ್ಸವದ ಮಹತ್ವದ ಕುರಿತು ಸ್ಯಾಮ್ ಸಂಗ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ಕಳೆದ 17 ವರ್ಷಗಳಿಂದ ಕೊರಿಯಾದಲ್ಲಿ ವಾಸಿಸುತ್ತಿರುವ ವಿಶ್ವನಾಥ್  ತಮ್ಮ  ಮಾತುಗಳನ್ನು ಹಂಚಿಕೊಂಡರು. ನಂತರ ಸಭೆಯಲ್ಲಿ ಇದ್ದ ಕನ್ನಡಿಗರಲ್ಲಿನ ಅನೇಕರೂ ತಮ್ಮ ಕನ್ನಡ ಭಾಷೆಯ ಮೇಲೆ ಇರುವ ಪ್ರೀತಿ, ಕನ್ನಡ ಸಂಸ್ಕೃತಿಯನ್ನು ಮುಂದುವರಿಸುವ ಜವಾಬ್ದಾರಿ, ಮತ್ತು ಇದರಲ್ಲಿ ನಮ್ಮ ಪಾತ್ರದ ಕುರಿತು ವ್ಯಕ್ತಪಡಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದವು. ಕಾರ್ಯಕ್ರಮದ ಅಂತ್ಯದಲ್ಲಿ ಕೊಳ್ಳೇಗಾಲದ ಕೇಶವಾನಂದ ಪ್ರಭು ವಂದನಾರ್ಪಣೆ ಸಲ್ಲಿಸಿದರು.  ಕೆ ಅರ್ ಪೇಟೆಯ  ಶಿಲ್ಪ ಮತ್ತು ಕೊಟ್ಟೂರಿನ ಸೌಮ್ಯಶ್ರಿ ರವರು ನಿರೂಪಿಸಿದರು.
“ಸಿರಿ ಕನ್ನಡಂ ಗೆಲ್ಗೆ, ಸಿರಿ ಕನ್ನಡಂ ಬಾಳ್ಗೆ” ಎಂಬ ಘೋಷಣೆಗಳೊಂದಿಗೆ  ಸಮಾರಂಭ ಅಂತ್ಯಗೊಂಡಿತು.