‘ಥಲಸ್ಸೆಮಿಯಾ’ ಕಾಯಿಲೆಯ ಮಗುವಿನ ಚಿಕಿತ್ಸೆಗೆ ಎಂ.ಜಿ. ಕನಕ ನೆರವು

(ಸಂಜೆವಾಣಿ ವಾರ್ತೆ)

ಬಳ್ಳಾರಿ:ಫೆ.2; ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಇಲ್ಲಿನ ಗುಡಾರ ನಗರದ ಐದು ವರ್ಷದ ಪುಷ್ಪಾ ಎಂಬ ಮಗುವಿನ ಚಿಕಿತ್ಸೆಗೆ ಧ್ರುವ ಆಸರೆ ಫೌಂಡೇಶನ್ ಅಧ್ಯಕ್ಷ ಎಂ.ಜಿ ಕನ ಹತ್ತು ಸಾವಿರ ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪುಷ್ಪಾ ತಂದೆ ಕುಮಾರ ಬಾದಗಿ ತಾಯಿ ಅಂಬಿಕಾ ಅವರಿಗೆ ಹಣ ನೀಡಿ, ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ ಹಾಗೂ ನನ್ನ ಸ್ನೇಹಿತರಿಗೆ, ಎಲ್ಲಾ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಹೇಳಿ ಅವರ ಕಡೆಯಿಂದ ಸಹಾಯ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬಂಡಿಹಟ್ಟಿ ಮಂಜು, ಮಾಸುಮ್ ಗುಡಾರನಗರ ಅಯ್ಯಪ್ಪ, ಹನುಮಂತ ಮೊದಲಾದವರು ಇದ್ದರು.