
ಸಂಜೆವಾಣಿ ನ್ಯೂಸ್
ಮೈಸೂರು. ಜ.23:- ನಗರದಲ್ಲಿ ತ್ರಿವಳಿ ಮಕ್ಕಳ ಜನನ. ಎನ್.ಆರ್.ಮೊಹಲ್ಲದ ಶಂಕರ್ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳದ 28 ವರ್ಷದ ಮಹಿಳೆ, ತ್ರಿವಳಿಗೆ ಜನ್ಮ. ಒಂದು ಹೆಣ್ಣು ಹಾಗೂ ಎರಡು ಗಂಡು ಮಗು ಜನನ. ಹೆಣ್ಣು (1.5 ಕೆಜಿ), ಗಂಡು (1.8 & 2.5 ಕೆಜಿ). ಬಹಳ ದಿನಗಳ ಬಳಿಕ ಅಪರೂಪದ ತ್ರಿವಳಿ ಜನನ. ಮೂವರು ಮಕ್ಕಳು ಆರೋಗ್ಯವಾಗಿದ್ದು, ವೈದ್ಯರ ಶುಶ್ರೂಷೆಯಲ್ಲಿವೆ. ಒಂದೆರೆಡು ದಿನಗಳಲ್ಲಿ ತಾಯಿ ಆರೈಕೆಗೆ ಒಪ್ಪಿಸಲಾಗುವುದು ಎಂದು ನರ್ಸಿಂಗ್ ಹೋಮ್ ನ ಮಾಲೀಕರು ಹಾಗೂ ಮುಖ್ಯಸ್ಥರಾದ ಡಾ.ಭಾರತೀ ಶಂಕರ್ ಮಾಹಿತಿ ನೀಡಿದರು.

























