ತುರ್ತು ಪರಿಸ್ಥಿತಿಯಲ್ಲಿ ನೆಟ್ ವರ್ಕ್ ಸಮಸ್ಯೆ: ದಿಡೀರ್ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ನ 20 :-
ತಾಲೂಕಿನ ಪೆÇನ್ನಾಚಿ ಗ್ರಾಮದಲ್ಲಿ ಹಲವು ದಿನಗಳಿಂದ ನೆಟ್ ವರ್ಕ್ ಸಮಸ್ಯೆಯಿಂದ ತುರ್ತು ಪರಿಸ್ಥಿತಿಯಲ್ಲಿ ಇಲ್ಲಿನ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಸ್ತೂರು ಗ್ರಾಮದ ಯುವಕರು ದಿಡೀರ್ ಪ್ರತಿಭಟನೆ ಕೈಗೊಂಡರು.


ಪೆÇನ್ನಾಚಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತುರ್ತುಪರಿಸ್ಥಿತಿಯ ವೇಳೆ ನೆಟ್ ವರ್ಕ್ ಸಿಗದೇ ಆಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗದೆ ಹಲವು ತಿಂಗಳು ಗಳಿಂದ ನೆಟ್ ವರ್ಕ್ ಸಮಸ್ಯೆಯಿಂದ ಕೆಲವರು ಪ್ರಾಣ ತೆತ್ತಿದ್ದಾರೆ ಎಂಬುದು ಕೂಡ ಆರೋಪ ಮಾಡಿದ್ದಾರೆ,
ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ತುರ್ತು ಆಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗದೆ ಬೇರೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹೋಗಿತ್ತು ಎಂಬುದನ್ನು ತಿಳಿಸಿದರು.


ರೇಷನ್ ಕಾರ್ಡ್ ಗೆ ಬೆರಳು ಮಡಗಿ ರೇಷನ್ ಪಡೆಯಲು ಕೂಡ ಕೆಲವೊಂದು ಗ್ರಾಮಗಳಲ್ಲಿ ನೆಟ್ ವರ್ಕ್ ಸಿಗುತ್ತಿಲ್ಲ , ಗ್ರಾಮದಿಂದ ಒಂದು ಕಿಲೋಮೀಟರ್ ಬಂದು ಬೆರಳು ಕೂಡಬೇಕು ಬಿಸಿಲು ಮಳೆ ಅನ್ನದೆ ಸರದಿಯಲ್ಲಿ ನಿಂತು ಕಾಡಂಚಿನ ಪ್ರಾಣಿಗಳ ಭಯದಲ್ಲಿ ನಿಲ್ಲಬೇಕು.
ಕಳೆದ ಒಂದು ವಾರದಿಂದ ನೆಟ್ ವರ್ಕ್ ಬೆಳಿಗ್ಗೆ ಹೋದರೆ ಸಂಜೆ ಬರುತ್ತಿದೆ,, ಈಗೇ ಕಾಡಂಚಿನ ಗ್ರಾಮಗಳಲ್ಲಿ ಈ ರೀತಿಯ ನೆಟ್ವರ್ಕ್ ಸಮಸ್ಯೆ ಇದ್ದು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಸರಿಪಡಿಸಬೇಕಾಗಿ ಎಂದು ಗ್ರಾಮದ ಮುಖಂಡರಾದ ಅಸ್ತೂರು ರವಿಕುಮಾರ್, ಮಹಾಲಿಂಗ ಅಸ್ತೂರು,ಮಹಾದೇವ್ ಪ್ರಸಾದ್, ಜಗದೀಶ್, ಅಭಿ, ಶಿವಪ್ಪ ಸೇರಿದಂತೆ ಇನ್ನಿತರರು ಆಗ್ರಹಿಸಿದರು.