ತಾ.ಪಂ. ಮಾಜಿ ಅಧ್ಯಕ್ಷ ಕೆ.ಪಿ. ಚಿನ್ನಸ್ವಾಮಿ ನಿಧನ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.06-
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪನಪುರ ಗ್ರಾಮದ ಕೆ.ಪಿ. ಚಿನ್ನಸ್ವಾಮಿ (86) ಅವರು ಇಂದು ನಿಧನರಾದರು.


ತಿಂಗಳ ಹಿಂದೆ ಸಂತೇಮರಹಳ್ಳಿ ಗ್ರಾಮದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.


ಕೆ.ಪಿ. ಚಿನ್ನಸ್ವಾಮಿರವರು ಅವಿಭಜಿತ ಮೈಸೂರು ಜಿಲ್ಲೆಯ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದರು, ಸಂತೆಮರಹಳ್ಳಿ ಮಂಡಲದ ಪ್ರಧಾನರಾಗಿದ್ದರು. ಒಂದು ಬಾರಿ ಚಾಮರಾಜನಗರ ತಾಲೂಕು ಪಂಚಾಯತ್‍ನ ಅಧ್ಯಕ್ಷರು ಸಹ ಆಗಿದ್ದರು. ಕೆ.ಪಿ. ಚಿನ್ನಸ್ವಾಮಿರವರ ಅಗಲುವಿಕೆಯಿಂದ ಜನತಾ ಪರಿವಾರದ ಕೊಂಡಿಯೊಂದು ಕಳಚಿದಂತಾಗಿದೆ
ಮೃತರಿಗೆ ಕೆಂಪನಪುರ ಗ್ರಾ.ಪಂ. ಅಧ್ಯಕ್ಷ ಕೆ.ಸಿ. ನಾಗರಾಜು ಸೇರಿದಂತೆ ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.


ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಸ್ವಗ್ರಾಮ ಕೆಂಪನಪುರದ ತೋಟದಲ್ಲಿ ನಡೆಯಲಿದೆ.
ಎಆರ್‍ಕೆ ಸಂತಾಪ : ಮೃತರ ನಿಧನಕ್ಕೆ ಶಾಸಕ ಎ.ಅರ್. ಕೃಷ್ಣಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.